ಕೊಪ್ಪಳ: ಇಂದು ದೇಶ್ಯಾದ್ಯಂತ ಮೂರನೇ ಹಂತದ ಕೊರೊನಾ ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾಗಿದೆ. ಆದರೆ, ಅಧಿಕಾರಗಳ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ಲಸಿಕೆ ಹಾಕುವ ಕಾರ್ಯ ಆರಂಭಗೊಂಡಿಲ್ಲ.
ಎಲ್ಲೆಡೆ ಇಂದಿನಿಂದ ಸಾರ್ಜನಿಕರಿಗೆ ಕೊರೊನಾ ಲಸಿಕೆ ಹಾಕುವ ಕಾರ್ಯ ಆರಂಭವಾಗಿದೆ. ಆದರೆ, ಜಿಲ್ಲೆಯಲ್ಲಿ ಮಧ್ಯಾಹ್ನ 12 ಗಂಟೆಯಾದರೂ ಜಿಲ್ಲಾಸ್ಪತ್ರೆ ಬಳಿ ವ್ಯಾಕ್ಸಿನ್ ಹಾಕಲು ಯಾವೊಬ್ಬ ಆರೋಗ್ಯ ಇಲಾಖೆ ಅಧಿಕಾರಿಗಳು ಸುಳಿದಿಲ್ಲ. ಇದರಿಂದ ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆ ಬಳಿ ಬಂದ ಜನರು ಕಾಯುವಂತಹ ಸ್ಥಿತಿ ಕಂಡು ಬಂದಿತು.
ಓದಿ: ಅಸ್ಸೋಂನಲ್ಲಿ ಭೀಕರ ರಸ್ತೆ ಅಪಘಾತ: ಮೈಸೂರು ಮೂಲದ ಯೋಧ ಹುತಾತ್ಮ
ಲಸಿಕಾ ಕೇಂದ್ರದಲ್ಲಿ ನರ್ಸ್ ಹಾಗೂ ಡಿ ದರ್ಜೆ ಸಿಬ್ಬಂದಿ ಹೊರತುಪಡಿಸಿದರೆ ನೊಂದಣಿ / ದಾಖಲೆ ಪರಿಶೀಲನಾ ಕೊಠಡಿ, ಲಸಿಕೆ ನೀಡುವ ಕೊಠಡಿ, ನಿಗಾ ಕೊಠಡಿ ಖಾಲಿ ಖಾಲಿಯಾಗಿದ್ದವು. ಇನ್ನೂ ಲಸಿಕೆ ಪಡೆಯಲು ಬಂದಿದ್ದ ನಗರಸಭೆ ಸಿಬ್ಬಂದಿ ಕಾದು ಕಾದು ಸುಸ್ತಾಗಿ ವಾಪಸ್ ತೆರಳಿದರು.