ಗಂಗಾವತಿ: ಬಸವರಾಜ ರಾಯರೆಡ್ಡಿ ಅಧಿಕಾರದಲ್ಲಿದ್ದಾಗ ಒಂದು ಮಾತನಾಡುತ್ತಾರೆ, ಅಧಿಕಾರ ಇಲ್ಲದಿದ್ದಾಗ ಒಂದು ಮಾತನಾಡುತ್ತಾರೆ. ಅವರ ಮಾತಿಗೆ ಹೆಚ್ಚಿನ ಬೆಲೆ ನೀಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಕೃಷ್ಣ ಭೀಂ ಸ್ಕ್ರೀಂ ಜಾರಿ ಮಾಡುವ ವಿಚಾರವಾಗಿ ತಾವು ಅಧಿಕಾರದಲ್ಲಿದ್ದಾಗ ಎಲ್ಲವೂ ಸಾಧ್ಯ ಎಂಬ ಧೋರಣೆ ಪ್ರದರ್ಶಿಸಿರುವ ರಾಯರೆಡ್ಡಿ, ಇದೀಗ ಬೇರೆ ರೀತಿ ಮಾತನಾಡುತ್ತಿದ್ದಾರೆ. ಆದರೆ ಇದು ಸರಿಯಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ನೀರಾವರಿ ನಿಗಮದ ಮುಖ್ಯ ಕಚೇರಿಯನ್ನು ನಾರಾಯಣಪುರಕ್ಕೆ ಬದಲಿಸಲಾಗಿತ್ತು. ಅಲ್ಲದೇ ಯೋಜನೆಯ ಕೊನೆಯ ಭಾಗದಲ್ಲಿದ್ದ ಕೊಪ್ಪಳವನ್ನು ಮುಖ್ಯ ಯೋಜನೆಗೆ ಸೇರ್ಪಡೆ ಮಾಡಲಾಗಿತ್ತು. ಇದು ರಾಯರೆಡ್ಡಿ ಅವರ ಗಮನಕ್ಕಿಲ್ಲವೇ ಎಂದು ಪ್ರಶ್ನಿಸಿದರು.