ETV Bharat / state

ಬೆಂಗಳೂರಿಗೆ ವಾಪಸ್​ ಹೋಗಲು ಮುಂದಾದ ವಲಸೆ ಕಾರ್ಮಿಕರು: ಬಸ್ ಇಲ್ಲದೆ ಪರದಾಟ - kustagi latest news

ಸೇವಾ ಸಿಂಧುವಿನಲ್ಲಿ ನೋಂದಣಿ ಮಾಡಿಸಿದ ಪ್ರಯಾಣಿಕರಿಗೆ ಒಂದು ಬಸ್ಸಿನಲ್ಲಿ 30 ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ 60ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿದ್ದು, ಬೆಂಗಳೂರಿಗೆ ಹೋಗಲು ಕೇವಲ ಒಂದು ಬಸ್ ಮಾತ್ರ ಬಿಡಲಾಗಿದೆ.

No bus facility to migrant workers for going Bangalore
ಬೆಂಗಳೂರಿಗೆ ವಾಪಸ್​ ಹೋಗಲು ಮುಂದಾದ ವಲಸೆ ಕಾರ್ಮಿಕರು
author img

By

Published : May 27, 2020, 12:18 PM IST

Updated : May 27, 2020, 12:31 PM IST

ಕುಷ್ಟಗಿ(ಕೊಪ್ಪಳ): ಲಾಕ್​ಡೌನ್​ ಪರಿಣಾಮ ಬೆಂಗಳೂರಿಂದ ವಾಪಸ್​ ತಮ್ಮ ಗ್ರಾಮಗಳಿಗೆ ಬಂದಿದ್ದವರು ಈಗ ಮತ್ತೆ ಬೆಂಗಳೂರಿಗೆ ಹೋಗಲು ಮುಂದಾಗಿದ್ದು, ಬಸ್​ ವ್ಯವಸ್ಥೆ ಇಲ್ಲದ ಕಾರಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್​ ವ್ಯವಸ್ಥೆ ಇಲ್ಲದ್ದಕ್ಕೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕುಷ್ಟಗಿ ಘಟಕದ ವಿರುದ್ಧ ಪ್ರಯಾಣಿಕರು ಕಿಡಿಕಾರಿದ್ದಾರೆ. ಸೇವಾ ಸಿಂಧುವಿನಲ್ಲಿ ನೋಂದಣಿ ಮಾಡಿಸಿದ ಪ್ರಯಾಣಿಕರಿಗೆ ಒಂದು ಬಸ್ಸಿನಲ್ಲಿ 30 ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ 60ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿದ್ದು, ಬೆಂಗಳೂರಿಗೆ ಹೋಗಲು ಕೇವಲ ಒಂದು ಬಸ್​ ಮಾತ್ರ ಬಿಡಲಾಗಿದೆ. ಈ ಹಿನ್ನೆಲೆ ಅಧಿಕಾರಿಗಳು ಹಾಗೂ ಪ್ರಯಾಣಿಕರ ನಡುವೆ ವಾಗ್ವಾದ ನಡೆದಿದೆ.

ಬೆಂಗಳೂರಿಗೆ ವಾಪಸ್​ ಹೋಗಲು ಮುಂದಾದ ವಲಸೆ ಕಾರ್ಮಿಕರು

ಬಸ್ ಡಿಪೋದ ಎಟಿಎಸ್ ನಾಗಪ್ಪ ಪ್ರತಿಕ್ರಿಯಿಸಿ, ಪ್ರಯಾಣಿಕರು ಒಮ್ಮೆಲೇ ಬಂದರೆ ಹೊಂದಾಣಿಕೆಗೆ ತುಸು ಸಮಯ ಬೇಕು. ಚಾಲಕ, ನಿರ್ವಾಹಕರನ್ನು ಸೇವೆಗೆ ಕರೆಯಿಸಿಕೊಳ್ಳಬೇಕಾಗುತ್ತದೆ. ಅವರು ಕರ್ತವ್ಯಕ್ಕೆ ಹಾಜರಾದ ನಂತರ ಬಸ್​ ಬಿಡಲಾಗುವುದು ಎಂದಿದ್ದಾರೆ.

Last Updated : May 27, 2020, 12:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.