ETV Bharat / state

ಗೌರಿ ಹುಣ್ಣಿಮೆ: ಕುಷ್ಟಗಿಯಲ್ಲಿ ಸಕ್ಕರೆ ಗೊಂಬೆ ಮಾರಾಟಕ್ಕೆ ನಿವಾರ್​​ ಮಳೆ ಅಡ್ಡಿ

ಕಳೆದ ಮಧ್ಯ ರಾತ್ರಿಯಿಂದ ಜಿಟಿ ಜಿಟಿ ಮಳೆ ಶುರುವಾಗಿದ್ದು, ಅಪರಾಹ್ನ 11 ಗಂಟೆಯಾದರೂ ಮೋಡಕವಿದ ಹಾಗೂ ಮಳೆ ವಾತಾವರಣ ಮುಂದುವರೆದಿದೆ. ಕಳೆದ ವಾರದಿಂದ ನಡೆದಿದ್ದ ಗೌರಿ ಹುಣ್ಣಿಮೆ ಸಕ್ಕರೆ ಅಚ್ಚಿನ ಗೊಂಬೆಗಳ ಭರ್ಜರಿ ಮಾರಾಟಕ್ಕೆ ಪ್ರತಿಕೂಲ ವಾತಾವರಣದಿಂದಾಗಿ ಖರೀದಿಸಲು ಜನ ಹೊರಗೆ ಬರುತ್ತಿಲ್ಲ. ಮಳೆಯಿಂದ ಸಕ್ಕರೆ ಗೊಂಬೆ ಕರಗಿ, ಬಣ್ಣ ಕಳೆದುಕೊಳ್ಳುವ ಆತಂಕ ಸಕ್ಕರೆ ಗೊಂಬೆ ಮಾರಾಟಗಾರರದ್ದಾಗಿದೆ.

ಮಳೆ ಅಡ್ಡಿ
ಮಳೆ ಅಡ್ಡಿ
author img

By

Published : Nov 28, 2020, 2:23 PM IST

ಕುಷ್ಟಗಿ (ಕೊಪ್ಪಳ): ನಿವಾರ್ ಪ್ರಭಾವದ ಹಿನ್ನೆಲೆ ಶುಕ್ರವಾರ ಇಡೀ ದಿನ ಕುಷ್ಟಗಿ ಪಟ್ಟಣದಲ್ಲಿ ಮಳೆ ಹಾಗೂ ಚಳಿ ವಾತಾವರಣಕ್ಕೆ ಜನ ಮನೆಯಿಂದ ಹೊರಕ್ಕೆ ಕಾಲಿಡಲು ಹಿಂದೇಟು ಹಾಕಿದ್ದಾರೆ. ಈ ಪರಿಸ್ಥಿತಿಯಲ್ಲಿ ನ.30 ರಂದು ಗೌರಿ ಹುಣ್ಣಿಮೆ ಸಾಂಪ್ರದಾಯಿಕ ಹಬ್ಬದ ಸಕ್ಕರೆ ಗೊಂಬೆ (ಸಕ್ಕರೆ ಆರತಿ) ಮಾರಾಟಕ್ಕೆ ಜಿಟಿ ಜಿಟಿ ಮಳೆ ಅಡ್ಡಿಯಾಗಿದೆ.

ಕಳೆದ ಗುರುವಾರ ಎಂದಿನಂತಿರದೇ ಮೋಡ ಕವಿದ ವಾತಾವರಣ ಇತ್ತು. ಕಳೆದ ಮಧ್ಯ ರಾತ್ರಿಯಿಂದ ಜಿಟಿ ಜಿಟಿ ಮಳೆ ಶುರುವಾಗಿದ್ದು, ಅಪರಾಹ್ನ 11 ಗಂಟೆಯಾದರೂ ಮೋಡಕವಿದ ಹಾಗೂ ಮಳೆ ವಾತವರಣ ಮುಂದುವರೆದಿದೆ. ಕಳೆದ ವಾರದಿಂದ ನಡೆದಿದ್ದ ಗೌರಿ ಹುಣ್ಣಿಮೆ ಸಕ್ಕರೆ ಅಚ್ಚಿನ ಗೊಂಬೆಗಳ ಭರ್ಜರಿ ಮಾರಾಟಕ್ಕೆ ಪ್ರತಿಕೂಲ ವಾತವರಣದಿಂದಾಗಿ ಖರೀದಿಸಲು ಜನ ಹೊರಗೆ ಬರುತ್ತಿಲ್ಲ. ಮಳೆಯಿಂದ ಸಕ್ಕರೆ ಗೊಂಬೆ ಕರಗಿ, ಬಣ್ಣ ಕಳೆದುಕೊಳ್ಳುವ ಆತಂಕ ಸಕ್ಕರೆ ಗೊಂಬೆ ಮಾರಾಟಗಾರರದ್ದು.

ಸಕ್ಕರೆ ಗೊಂಬೆ ಮಾರಾಟಕ್ಕೆ ನಿವಾರ್​​ ಮಳೆ ಅಡ್ಡಿ

ವರ್ಷದಲ್ಲಿ ಸೀಗಿ ಹುಣ್ಣಿಮೆ ಹಾಗೂ ಗೌರಿ ಹುಣ್ಣಿಮೆಯಂದು ಸಕ್ಕರೆಗೊಂಬೆ ಮಾರಾಟ ಮಾಡಲಾಗುತ್ತದೆ. ಪ್ರತಿ ಕೆ.ಜಿ.ಗೆ 100 ರೂ. ಇದ್ದು ಈ ಸೀಜನ್​ನಲ್ಲಿ ಉತ್ತಮ ಆದಾಯ ತರುವ ಸಂದರ್ಭದಲ್ಲಿ ಮಳೆ ಅಡ್ಡಿಯಾಗಿದೆ. ಸಕ್ಕರೆ ಗೊಂಬೆಗಳಿಗೆ ಪ್ಲಾಸ್ಟಿಕ್ ಹೊದಿಸಿ ಮಳೆಯಲ್ಲಿ ನೆನೆಸಿಕೊಂಡು ಚಳಿಯಲ್ಲಿ ಮಾರಾಟ ಮಾಡಬೇಕಿದ ಪರಿಸ್ಥಿತಿ ಎದುರಾಗಿದೆ. ಜನ ಹೊರಗೆ ಬಂದರೆ ವ್ಯಾಪಾರವಾಗಲಿದೆ ಇಲ್ಲದಿದ್ದರೇ ಇದೇ ಪರಿಸ್ಥಿತಿ ಮುಂದುವರಿದು ಕಷ್ಟವಾಗಲಿದೆ ಎಂದು ಸಕ್ಕರೆ ಗೊಂಬೆ ತಯಾರಕರು ಹೇಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.