ಗಂಗಾವತಿ: ಹಲವು ವರ್ಷಗಳಿಂದ ಅಂತ್ಯಕಾಣದ ವಿವಿಧ ನಮೂನೆಯ 179 ವ್ಯಾಜ್ಯ ಪ್ರಕರಣಗಳಿಗೆ ಇಲ್ಲಿನ ಲೋಕ ಅದಾಲತ್ನಲ್ಲಿ ದೂರುದಾರರು ಮತ್ತು ಕಕ್ಷಿದಾರರ ಮಧ್ಯೆ ನ್ಯಾಯಾಧೀಶರು ರಾಜಿ ಸಂಧಾನ ಮಾಡಿಸುವಲ್ಲಿ ಯಶಸ್ವಿಯಾದರು.
ಈ ಮೂಲಕ ಒಟ್ಟು 2.51 ಕೋಟಿ ರೂಪಾಯಿ ಮೊತ್ತದ ಪ್ರಕರಣಗಳಿಗೆ ರಾಜಿ ಮಾಡಿಸಲಾಯಿತು. ಸಾಲ ಮನ್ನಾ ಯೋಜನೆ ಘೋಷಣೆ ಮಾಡಿದ ಬಳಿಕವೂ ರೈತರಿಗೆ ನೋಟಿಸ್ ನೀಡಿದ್ದ ಇಲ್ಲಿನ ಮೂರು ಬ್ಯಾಂಕಿನ 13 ಪ್ರಕರಣ ಇದರಲ್ಲಿದ್ದವು.
ಚೆಕ್ಬೌನ್ಸ್, ಮೋಟಾರು ವಾಹನ ಕಾಯ್ದೆ, ತಾಂತ್ರಿಕ ದೋಷದಂತ ಒಟ್ಟು 17ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸಂಧಾನ ಏರ್ಪಡಿಸಲಾಯಿತು. ನ್ಯಾಯಾಧೀಶರಾದ ಜಿ.ಅನಿತಾ, ಆರ್.ಎಂ.ನದಾಫ್, ಹೆಚ್.ಡಿ.ಗಾಯಿತ್ರಿ ಅದಾಲತ್ನಲ್ಲಿ ಪಾಲ್ಗೊಂಡಿದ್ದರು.