ETV Bharat / state

ಕುಷ್ಟಗಿಯಲ್ಲಿ ಅರಣ್ಯ ಇಲಾಖೆಯ ಪರಿಸರ ಪ್ರೇಮ: ದಾರಿಯುದ್ದಕ್ಕೂ ಬೇವಿನ ಮರಗಳ ಪೋಷಣೆ - ಪ್ರಾದೇಶಿಕ ಅರಣ್ಯ ಇಲಾಖೆ

ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಯಾಗಿದ್ದ ಬಿ.ಪಿ.ದುಧಗಿ ಅವರ ಪ್ರೇರಣೆಯಿಂದ ಕುರಬನಾಳದಿಂದ ಕ್ಯಾದಿಗುಪ್ಪ ಕ್ರಾಸ್​ವರೆಗೂ ಬೇವಿನ ಮರಗಳನ್ನು ನೆಟ್ಟು ಅರಣ್ಯ ಇಲಾಖೆ ಪೋಷಣೆ ಮಾಡುತ್ತಿದೆ.

ದಾರಿಯುದ್ದಕ್ಕೂ ಬೇವಿನ ಮರಗಳ ಪೋಷಣೆ
ದಾರಿಯುದ್ದಕ್ಕೂ ಬೇವಿನ ಮರಗಳ ಪೋಷಣೆ
author img

By

Published : Jun 5, 2020, 12:07 PM IST

ಕುಷ್ಟಗಿ (ಕೊಪ್ಪಳ): ಕುರಬನಾಳದಿಂದ ಕ್ಯಾದಿಗುಪ್ಪ ಕ್ರಾಸ್​ವರೆಗೂ ಬೇವಿನ ಮರಗಳನ್ನು ನೆಟ್ಟು ಅರಣ್ಯ ಇಲಾಖೆ ಪೋಷಣೆ ಮಾಡುತ್ತಿದೆ. ಟ್ಯಾಂಕರ್​ ಮೂಲಕ ನೀರು ತಂದು ಆರೈಕೆ ಮಾಡುವ ಮೂಲಕ ಹಸಿರು ನಳನಳಿಸುವಂತೆ ಮಾಡಿದೆ.

ಹೆದ್ದಾರಿಗೆ ಹೊಂದಿಕೊಂಡಿರುವ ಕಲಕೇರಿ ಸಸ್ಯಪಾಲನ ಕ್ಷೇತ್ರಕ್ಕೆ ಹೋಗಿ ಬರುವಾಗ ಸದಾ ಈ ಸಾಲು ಮರಗಳು ಜನರಿಗೆ ತಂಪಾದ ಗಾಳಿಯನ್ನು ನೀಡುತ್ತದೆ. ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಯಾಗಿದ್ದ ಬಿ.ಪಿ.ದುಧಗಿ ಅವರು, ಈ ಭಾಗದಲ್ಲಿ ಬೇವು ಬೆಳೆಯಲು ಪ್ರೇರೇಪಿಸಿದ್ದರು.

ದಾರಿಯುದ್ದಕ್ಕೂ ಬೇವಿನ ಮರಗಳ ಪೋಷಣೆ

ಈ ಗಿಡಗಳಿಗೆ ಮುಳ್ಳಿನ ಬೇಲಿ ಹೆಣೆದು, ಮೀಟರ್ ವ್ಯಾಪ್ತಿಯಲ್ಲಿ ಪಾತಿ ಅಗೆದು, ಮಳೆಗಾಲದಲ್ಲಿ ನೀರು ಇಂಗಿಸುವ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಇಲ್ಲಿ ಪ್ರತಿ 4 ಕಿ.ಮೀ.ಗೆ ಒಬ್ಬ ವನಪಾಲಕರನ್ನು ಇಲಾಖೆ ನಿಯೋಜಿಸಿದೆ. ಬೇವಿನ ಮರಗಳು ಈ ಮಣ್ಣಿನಲ್ಲಿ ಹುಲುಸಾಗಿ ಬೆಳೆದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.