ಗಂಗಾವತಿ: ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಆರುವರೆ ಕೋಟಿ ಮೊತ್ತದ 715 ವ್ಯಾಜ್ಯಗಳ ಇತ್ಯರ್ಥ ಮಾಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಡಳಿತಾಧಿಕಾರಿ ತಿಳಿಸಿದ್ದಾರೆ.
ಇನ್ನು ಗಂಗಾವತಿ ತಾಲೂಕಿನಲ್ಲಿ ಜೆಎಂಎಫ್ಸಿ, ಹಿರಿಯ ಸಿವಿಲ್ ಮತ್ತು ಕಿರಿಯ ಶ್ರೇಣಿಯ ಮೂರು ನ್ಯಾಯಾಲಗಳಲ್ಲಿ ಪ್ರಕರಣಗಳ ವಿಲೇವಾರಿ ಮಾಡಲಾಗಿದೆ.
ನ್ಯಾಯಾಧೀಶರಾದ ಜಿ. ಅನಿತಾ, ಅರ್.ಎಂ. ನದಾಫ್ ಹಾಗೂ ಎಚ್.ಡಿ. ಗಾಯತ್ರಿ ಅವರನ್ನೊಳಗೊಂಡ ಸಮಿತಿ ಒಟ್ಟು 480 ಪ್ರಕರಣಗಳಲ್ಲಿ 223 ಪ್ರಕರಣಗಳನ್ನು ವಿಲೇವಾರಿ ಮಾಡಿದೆ.