ಗಂಗಾವತಿ: ಈದ್ ಮಿಲಾದ್ ಸಂಭ್ರಮ ಕಳೆಗಟ್ಟಿದೆ. ನಗರದಲ್ಲಿ ಮುಸ್ಲಿಂ ಬಾಂಧವರು ಹಮ್ಮಿಕೊಂಡಿದ್ದ ಬೃಹತ್ ಮೆರವಣಿಗೆಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಧ್ವಜ ಹಾರಾಡಿದೆ.
ಬೇರೂನಿ ಮಸೀದಿಯಿಂದ ಪೀರಜಾಧೆ, ಪಂಪಾನಗರ ವೃತ್ತದ ರಸ್ತೆ ಮೂಲಕ ಜುಮ್ಮಾ ಮಸೀದಿವರೆಗೆ ಹಮ್ಮಿಕೊಂಡಿದ್ದ ಬೃಹತ್ ಶೋಭಾಯಾತ್ರೆಯಲ್ಲಿ ತಿರಂಗ ಧ್ವಜವನ್ನು ಹಿಡಿದು ಮುಸ್ಲಿಂ ಬಾಂಧವರು ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನ ಈ ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.