ETV Bharat / state

ಕಾವಿ ಬಟ್ಟೆ, ಮಾಲೆ ಧರಿಸಿ ಅಂಜನಾದ್ರಿಗೆ ಬಂದು ಭಾವೈಕ್ಯತೆ ಸಾರಿದ ಮುಸ್ಲಿಂ ಭಕ್ತ - aiyappa swamy temple

ಮುಸ್ಲಿಂ ಧರ್ಮೀಯ ವ್ಯಕ್ತಿಯೊಬ್ಬರು ಹನುಮಮಾಲೆ ಧರಿಸಿ ಪವಿತ್ರ ಕ್ಷೇತ್ರ ಅಂಜನಾದ್ರಿಗೆ ಭೇಟಿ ನೀಡಿದರು.

a  muslim devotee who visited anjanadri temple
ಮಾಲೆಧರಿಸಿ ಅಂಜನಾದ್ರಿಗೆ ಬೇಟಿ ಭಾವೈಕ್ಯತೆ ಸಾರಿದ ಮುಸ್ಲಿಂ ಭಕ್ತ
author img

By

Published : Dec 5, 2022, 3:33 PM IST

Updated : Dec 5, 2022, 4:19 PM IST

ಗಂಗಾವತಿ: ಹನುಮದ್ ವ್ರತದ ಅಂಗವಾಗಿ 11 ದಿನ ಹನುಮಮಾಲೆ ಧರಿಸಿ ಭಕ್ತಿ ಶ್ರದ್ಧೆಯಿಂದ ವ್ರತಾಚರಿಸಿದ ವಿಜಯಪುರ ಜಿಲ್ಲೆಯ ನರಸಲಗಿ ಗ್ರಾಮದ ಇಮಾಮ್​ಸಾಬ್​ ಜಾಫರಸಾಬ್​ ಚಪ್ಪರಬಂದಿ ಎಂಬುವವರು ಸೋಮವಾರ ಅಂಜನಾದ್ರಿ ದೇವಸ್ಥಾನಕ್ಕೆ ಆಗಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಾಫರಸಾಬ್​, 'ನಾನು ನಿತ್ಯವೂ ಹಿಂದು ಮತ್ತು ನನ್ನ ಧರ್ಮದ ದೇವರ ಪೂಜೆ ಮಾಡುತ್ತೇನೆ. 1994 ರಲ್ಲಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದೆ. ಇದೀಗ ಹನುಮನ ಮಾಲೆ ಧರಿಸಿದ್ದೇನೆ. ನಾನು ಹನುಮನ ಪರಮ ಭಕ್ತ' ಎಂದರು.

ಕಾವಿ ಬಟ್ಟೆ, ಮಾಲೆ ಧರಿಸಿ ಅಂಜನಾದ್ರಿಗೆ ಬಂದು ಭಾವೈಕ್ಯತೆ ಸಾರಿದ ಮುಸ್ಲಿಂ ಭಕ್ತ

'ನಾವು ಜಾತಿ, ಧರ್ಮ ಎಂಬ ಸಂಕುಚಿತ ಮನೋಭಾವನೆ ಬಿಡಬೇಕು. ಯಾರ ಮನಸ್ಸಿಗೆ ಏನು ಆಚರಣೆ ಮಾಡಬೇಕು ಎನಿಸುತ್ತದೋ ಅದನ್ನು ಮಾಡಬೇಕು. ನಾವೆಲ್ಲರೂ ಒಂದು ಎಂಬ ಭಾವನೆ ಬಂದರೆ ದೇಶ ತನ್ನಿಂದ ತಾನೇ ಸದೃಢವಾಗುತ್ತದೆ. ಹೊರಗಿನ ಯಾವ ದೇಶದವರೂ ನಮ್ಮಲ್ಲಿ ಕಡ್ಡಿ ಆಡಿಸಲಾಗದು' ಎಂದು ಅವರು​ ಹೇಳಿದರು.

ಇದನ್ನೂ ಓದಿ: ಮಾಲಾಧಾರಣೆ ಮಾಡಿ ಗಂಗಾವತಿಗೆ ಅಧಿಕೃತ ಎಂಟ್ರಿ ಕೊಟ್ಟ ಜನಾರ್ದನ ರೆಡ್ಡಿ

Last Updated : Dec 5, 2022, 4:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.