ಗಂಗಾವತಿ: ತಾಲೂಕಿನ ಅಂಜನಾದ್ರಿ ದೇಗುಲದಲ್ಲಿ ಇರಿಸಲಾಗಿದ್ದ ಭಕ್ತರ ಕಾಣಿಕೆ ಪೆಟ್ಟಿಗೆಯಲ್ಲಿ ನಾನಾ ರಾಷ್ಟ್ರಗಳ ನಾಲ್ಕು ನೋಟು ಹಾಗೂ ಹತ್ತಕ್ಕೂ ಹೆಚ್ಚು ವಿದೇಶಿ ನಾಣ್ಯಗಳು ಪತ್ತೆಯಾಗಿವೆ.
ಈ ವರ್ಷದಲ್ಲಿ ಮೊದಲ ಬಾರಿಗೆ ಕಂದಾಯ ನಿರೀಕ್ಷ ಮಂಜುನಾಥ ಹಿರೇಮಠ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಸಲಾಗಿದ್ದು, ಇದೆ ಮೊದಲ ಬಾರಿಗೆ ಬಾಂಗ್ಲಾದ ನೋಟು ಪತ್ತೆಯಾಗಿದೆ. ನೇಪಾಳ, ಆಸ್ಟ್ರೇಲಿಯಾ, ಇಂಗ್ಲೆಂಡ್, ಕೆನಡಾ, ಶ್ರೀಲಂಕಾ ಸೇರಿದಂತೆ ನಾನಾ ದೇಶಗಳ ನೋಟುಗಳು ಪತ್ತೆಯಾಗಿದ್ದವು.
ಇನ್ನು ಕಾಣಿಕೆ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಪತ್ತೆಯಾಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.