ETV Bharat / state

ಕೊಪ್ಪಳ: ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಅಂದರ್!

ಪತಿಯನ್ನು ಕೊಲೆ‌‌ ಮಾಡಿಸಿದ್ದ ಪತ್ನಿ ಸೇರಿ‌‌ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಯಮುನಾಕ್ಷಿ ಹಾಗೂ ಶಿವಪ್ಪನ ನಡುವಿನ ಅಕ್ರಮ ಸಂಬಂಧಕ್ಕೆ ನಿಂಗಪ್ಪ ಅಡ್ಡಿಯಾಗುತ್ತಾನೆ ಎಂಬ ದುರುದ್ದೇಶದಿಂದ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

Koppal murder case
Koppal murder case
author img

By

Published : Jul 5, 2020, 8:02 PM IST

ಕೊಪ್ಪಳ: ಪತಿಯನ್ನು ಕೊಲೆ‌‌ ಮಾಡಿಸಿದ್ದ ಪತ್ನಿ ಸೇರಿ‌‌ ಮೂರು ಜನ ಆರೋಪಿಗಳನ್ನು ಬಂಧಿಸುವಲ್ಲಿ ತಾಲೂಕಿನ ಅಳವಂಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಲೂಕಿನ ಬೈರಾಪುರದ ಯಮುನಾಕ್ಷಿ ಬೆಟಗೇರಿ, ಬೋಚನಹಳ್ಳಿ ಗ್ರಾಮದ ಶಿವಪ್ಪ ಪೂಜಾರ ಹಾಗೂ ಬೈರಾಪುರದ ವಿಜಯ ಬ್ಯಾಡಗಿ ಎಂಬುವರು ಬಂಧಿತ ಆರೋಪಿಗಳು.

ಬೈರಾಪುರ ಗ್ರಾಮದ ನಿಂಗಪ್ಪ ಬೆಟಗೇರಿ ಎಂಬಾತನನ್ನು ಜು. 4 ರಂದು ಕೊಲೆ‌ ಮಾಡಿ ಬೋಚನಹಳ್ಳಿ ಸೀಮೆಯ ಹಳ್ಳದಲ್ಲಿ ಹೂತು ಹಾಕಲಾಗಿತ್ತು. ನಿಂಗಪ್ಪ ಕಾಣೆಯಾಗಿರುವ ಕುರಿತು ಕೊಲೆಯಾದ ನಿಂಗಪ್ಪನ ಅಣ್ಣ ಯಲ್ಲಪ್ಪನವರು ಅಳವಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಅಳವಂಡಿ‌ ಪೊಲೀಸರು, ಕೊಲೆಯಾದ ನಿಂಗಪ್ಪನ ಪತ್ನಿ ಯಮುನಾಕ್ಷಿ ಸೇರಿ ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಯಮುನಾಕ್ಷಿ ಹಾಗೂ ಶಿವಪ್ಪನ ನಡುವಿನ ಅಕ್ರಮ ಸಂಬಂಧಕ್ಕೆ ನಿಂಗಪ್ಪ ಅಡ್ಡಿಯಾಗುತ್ತಾನೆ ಎಂಬ ದುರುದ್ದೇಶದಿಂದ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.