ETV Bharat / state

ಖಾಲಿ ಬಿಟ್ಟ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಮುಂದಾದ ಕೊಪ್ಪಳ ನಗರಸಭೆ

ನಗರಸಭೆ ವ್ಯಾಪ್ತಿಯಲ್ಲಿ ಹಮಾಲರ ಕಾಲೋನಿ, ಗಣೇಶ ನಗರ,‌ ಕುಷ್ಟಗಿ ರಸ್ತೆ ಹೀಗೆ ಅನೇಕ ಆಶ್ರಯ ಕಾಲೋನಿಗಳಲ್ಲಿ ಸುಮಾರು 150 ರಷ್ಟು ನಿವೇಶನಗಳಲ್ಲಿ ಇಂತಹ ನಿವೇಶನ ಕಂಡು ಬಂದಿವೆ.

municipal-corporation-koppal
ಕೊಪ್ಪಳ ನಗರಸಭೆ
author img

By

Published : Mar 2, 2021, 11:13 AM IST

ಕೊಪ್ಪಳ: ನಗರದ ವಿವಿಧ ಆಶ್ರಯ ಬಡಾವಣೆಗಳಲ್ಲಿ ನಿವೇಶನ ಪಡೆದ ಫಲಾನುಭವಿಗಳು ಆ ನಿವೇಶನ ಖಾಲಿ ಬಿಟ್ಟಿದ್ದರೆ, ಅದನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಕೊಪ್ಪಳ ನಗರಸಭೆ ಚಿಂತನೆ ನಡೆಸಿದೆ. ಅಲ್ಲದೇ ಖಾಲಿ ಬಿಟ್ಟಿರುವ ನಿವೇಶನದಲ್ಲಿ ಕಚ್ಚಾ ಮನೆ/ಶೆಡ್ ನಿರ್ಮಿಸಿಕೊಂಡು ವಾಸಿಸುವಂತೆ ಎಚ್ಚರಿಕೆ ನೀಡಿದೆ.

ಕೊಪ್ಪಳ ನಗರಸಭೆ

ಓದಿ: ಬಿಗ್​ಬಾಸ್ ಸೀಸನ್​ 8: ಈ ವಾರ ನಾಮೀನೇಟ್ ಆದ ಐವರು ಯಾರು!

ಕಳೆದ ಸುಮಾರು 20-25 ವರ್ಷಗಳಲ್ಲಿ ನಗರದಲ್ಲಿ ಅನೇಕ ಆಶ್ರಯ ಬಡಾವಣೆ ರಚಿಸಿ ಫಲಾನುಭವಿಗಳಿಗೆ ಆಶ್ರಯ ನಿವೇಶನ ಹಂಚಿಕೆ ಮಾಡಿದೆ. ಹೀಗೆ ನಿವೇಶನದ ಹಕ್ಕು ಪತ್ರ ಪಡೆದುಕೊಂಡಿರುವ ಫಲಾನುಭವಿಗಳು ಸುಮಾರು 20-25 ವರ್ಷಗಳಿಂದ ಅಲ್ಲಿ ಮನೆ ನಿರ್ಮಿಸಿಕೊಳ್ಳದೇ ಹಾಗೆ ಬಿಟ್ಟಿರುವುದು ನಗರಸಭೆ ಗಮನಕ್ಕೆ ಬಂದಿದೆ.

ನಿವೇಶನ ಖಾಲಿ ಬಿಟ್ಟಿರುವುದರಿಂದ ಆ ನಿವೇಶನದಲ್ಲಿ ಜಾಲಿ ಬೆಳೆದು, ಕನಕಡ್ಡಿ, ಗಲೀಜಾಗಿ ಹಂದಿಗಳ ಆವಾಸ ಸ್ಥಾನಗಳಾಗಿವೆ. ಇದರಿಂದಾಗಿ ಸುತ್ತಮುತ್ತ ವಾಸಿಸುವ ಜನರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ನಗರದಲ್ಲಿನ ವಿವಿಧ ಆಶ್ರಯ ಬಡಾವಣೆಗಳಲ್ಲಿನ ಖಾಲಿ ನಿವೇಶನಗಳನ್ನು ಹಾಗೆ ಬಿಟ್ಟರೆ ಹಕ್ಕುಪತ್ರ ವಾಪಸ್ ಪಡೆದು ಅರ್ಹರಿಗೆ ಆ ನಿವೇಶನ ಹಂಚಿಕೆ ಮಾಡಲು ನಗರಸಭೆ ಚಿಂತನೆ ನಡೆಸಿದೆ.

ಈ ಕುರಿತಂತೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ಕೊಪ್ಪಳ ನಗರಸಭೆ ಆಯುಕ್ತ ಮಂಜುನಾಥ ಅವರು, ನಗರಸಭೆ ವ್ಯಾಪ್ತಿಯಲ್ಲಿ ಹಮಾಲರ ಕಾಲೋನಿ, ಗಣೇಶ ನಗರ,‌ ಕುಷ್ಟಗಿ ರಸ್ತೆ ಹೀಗೆ ಅನೇಕ ಆಶ್ರಯ ಕಾಲೋನಿಗಳಲ್ಲಿ ಸುಮಾರು 150 ರಷ್ಟು ನಿವೇಶನಗಳಲ್ಲಿ ಇಂತಹ ನಿವೇಶನ ಕಂಡು ಬಂದಿವೆ. ಅಲ್ಲದೇ ಆಶ್ರಯ‌ ನಿಯಮಾವಳಿ, ಷರತ್ತುಗಳನ್ನು ಉಲ್ಲಂಘಿಸಿರುವ ಪ್ರಕರಣಗಳು ಸಹ ಕಂಡು ಬಂದಿವೆ.

ಹೀಗಾಗಿ ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ವಿವಿಧ ಆಶ್ರಯ ಬಡಾವಣೆಗಳಲ್ಲಿ ನಿವೇಶನ ಪಡೆದು ಮನೆ‌ ಅಥವಾ ಶೆಡ್ ನಿರ್ಮಿಸಿಕೊ‌ಂಡು ವಾಸ ಮಾಡದೇ ಇರುವವರನ್ನು ಗುರುತಿಸಿ ಅವರಿಂದ ಹಕ್ಕುಪತ್ರ ವಾಪಸ್ ಪಡೆದು ನಿಯಮಾನುಸಾರ ಅರ್ಹರಿಗೆ ಮರು ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ ಆಶ್ರಯ ಬಡಾವಣೆಗಳಲ್ಲಿ ನಿವೇಶನ ಪಡೆದು ಹಾಗೆ ಬಿಟ್ಟಿರುವವರು ಒಂದು ತಿಂಗಳೊಳಗಾಗಿ ಆ ಜಾಗದಲ್ಲಿ ಮನೆ ಅಥವಾ ಶೆಡ್ ನಿರ್ಮಿಸಿಕೊಂಡು ವಾಸ ಮಾಡಬೇಕು. ಇಲ್ಲವಾದಲ್ಲಿ ನಿವೇಶನ ಕಳೆದುಕೊಳ್ಳಬೇಕಾಗುತ್ತದೆ ಎಂದು ನಗರಸಭೆ ಆಯುಕ್ತ ಮಂಜುನಾಥ ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.