ETV Bharat / state

ಅಯೋಧ್ಯೆಯಿಂದ ಕಿಷ್ಕಿಂಧೆಗೆ ರೈಲು ಆರಂಭಿಸುವಂತೆ ಪತ್ರ ಬರೆದ ಕೊಪ್ಪಳ ಸಂಸದ - ಹನುಮನ ಜನ್ಮ ಭೂಮಿ ಕಿಷ್ಕಿಂಧೆ

ರೈಲ್ವೆ ಖಾತೆ ಸಚಿವ ಅಶ್ವನಿ ವೈಷ್ಣವ್ ಮತ್ತು ಕೇಂದ್ರದ ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಶ್ರೀಪಾದ ಯಸ್ಸೋ ಅವರಿಗೆ ಅಯೋಧ್ಯೆಯಿಂದ ಕಿಷ್ಕಿಂಧೆಗೆ ರೈಲು ಆರಂಭಿಸುವಂತೆ ಸಂಸದ ಕರಡಿ ಸಂಗಣ್ಣ ಪತ್ರ ಬರೆದಿದ್ದಾರೆ.

ಅಯೋಧ್ಯೆಯಿಂದ ಕಿಷ್ಕಿಂಧೆಗೆ ರೈಲು ಆರಂಭಿಸುವಂತೆ ಪತ್ರ

author img

By

Published : Nov 27, 2021, 4:42 PM IST

ಗಂಗಾವತಿ(ಕೊಪ್ಪಳ): ರಾಮನ ಜನ್ಮ ಭೂಮಿ ಉತ್ತರ ಪ್ರದೇಶದ ಅಯೋಧ್ಯೆಯಿಂದ ಹನುಮನ ಜನ್ಮ ಭೂಮಿ ಕಿಷ್ಕಿಂಧೆಗೆ (ಗಂಗಾವತಿ) ರೈಲು ಸೇವೆಯ ಯೋಜನೆ ಆರಂಭಿಸುವಂತೆ ಸಂಸದ ಕರಡಿ ಸಂಗಣ್ಣ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಮತ್ತು ಕೇಂದ್ರದ ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಶ್ರೀಪಾದ ಯಸ್ಸೋ ಅವರಿಗೆ ಈ ಬಗ್ಗೆ ಸಂಸದ ಪತ್ರ ಬರೆದು ತಕ್ಷಣ ರೈಲ್ವೆ ಸೇವೆಯನ್ನು ಆರಂಭಿಸುವಂತೆ ಒತ್ತಾಯಿಸಿದ್ದಾರೆ.

ಸಂಸದ ಕರಡಿ ಸಂಗಣ್ಣ ಬರೆದ ಪತ್ರ
ಸಂಸದ ಕರಡಿ ಸಂಗಣ್ಣ ಬರೆದಿರುವ ಪತ್ರ

ಅಂಜನಾದ್ರಿ ತಾಣವನ್ನು ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಮತ್ತು ರಾಮಾಯಣ ಕಾಲದಲ್ಲಿ ಮಹತ್ವದ ಸ್ಥಾನ ಪಡೆದಿದ್ದ ಅಯೋಧ್ಯೆ ಮತ್ತು ಕಿಷ್ಕಿಂಧೆಯನ್ನು ಪ್ರಮುಖ ಯಾತ್ರಾ ಸ್ಥಳವಾಗಿಸುವ ನಿಟ್ಟಿನಲ್ಲಿ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸಿಕೊಡಬೇಕಿದೆ ಎಂದಿದ್ದಾರೆ.

ರಾಮ ಮತ್ತು ಹನುಮ ಇಬ್ಬರಿಗೂ ಪೌರಾಣಿಕ ಕಥೆಗಳಲ್ಲಿ ಮಹತ್ವದ ಪಾತ್ರವಿದೆ. ಎರಡೂ ತೀರ್ಥ ಕ್ಷೇತ್ರಗಳ ಅಭಿವೃದ್ಧಿ ಮತ್ತು ಯಾತ್ರಾರ್ಥಿಗಳಿಗೆ ಯಾತ್ರೆ ಕೈಗೊಳ್ಳಲು ಸುಲಭವಾಗಿಸುವ ದೃಷ್ಟಿಯಿಂದ ತಕ್ಷಣ ರೈಲ್ವೆ ಯೋಜನೆ ಆರಂಭಿಸುವಂತೆ ಸಂಸದರು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.