ETV Bharat / state

ಮಹಿಳೆ ಕೊಪ್ಪಳಕ್ಕೆ ಕರೆತಂದ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ: ಸಂಸದ ಸಂಗಣ್ಣ ಕರಡಿ

ಯಾರೇ ಕಾನೂನು ಬಾಹಿರ ಕೆಲಸ ಮಾಡಿದರೂ ಸಪೋರ್ಟ್ ಮಾಡುವುದಿಲ್ಲ. ನಮ್ಮ ಜಾತಿಯವರಿದ್ದರೂ ಸರಿ, ನಮ್ಮ ಬಳಗದವರಿದ್ದರೂ ಸಪೋರ್ಟ್ ಮಾಡಲ್ಲ. ಮಹಿಳೆಯನ್ನು ಕೊಪ್ಪಳಕ್ಕೆ ಕರೆತಂದ ಪ್ರಕರಣಕ್ಕೂ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ.

author img

By

Published : Apr 17, 2020, 7:33 PM IST

MP Sanganna Karadi Pressmeet in Koppal
ಸಂಸದ ಸಂಗಣ್ಣ ಕರಡಿ

ಕೊಪ್ಪಳ: ಕೊರೊನಾ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಹಿಳೆಯನ್ನು ಕೊಪ್ಪಳಕ್ಕೆ ಕರೆತಂದ ಪ್ರಕರಣಕ್ಕೂ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಮಹಿಳೆ ಕರೆತಂದಿದ್ದಾರೆ ಎನ್ನಲಾದ ಗುರುಬಸವ ಹೊಳಗುಂದಿ ಕುರಿತು ಕೇಳಿದ ಪ್ರಶ್ನೆಗೆ, ಆ ಪ್ರಕರಣಕ್ಕೂ ಬಿಜೆಪಿಗೂ ಲಿಂಕ್ ಇಲ್ಲ. ಯಾರೇ ಕಾನೂನು ಬಾಹಿರ ಕೆಲಸ ಮಾಡಿದರೂ ಸಪೋರ್ಟ್ ಮಾಡುವುದಿಲ್ಲ. ನಮ್ಮ ಜಾತಿಯವರಿದ್ದರೂ ಸರಿ, ನಮ್ಮ ಬಳಗದವರಿದ್ದರೂ ಸಪೋರ್ಟ್ ಮಾಡಲ್ಲ. ಅವರ ಮೇ‌ಲೆ‌ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಸಂಸದ ಸಂಗಣ್ಣ ಕರಡಿ

ಬಿಜೆಪಿಗೆ ಮತ ಹಾಕಿದವರು ನಮ್ಮ ಮುಖಂಡರು ಅನ್ನೋದರಲ್ಲಿ ತಪ್ಪೇನಿದೆ? ಕಾನೂನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನವರಿಗೆ ದೊಡ್ಡದಲ್ಲ. ಕಾನೂನು ಮೀರಿದವರು ಶಿಕ್ಷೆ ಅನುಭವಿಸುತ್ತಾರೆ. ಇದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ. ಅಲ್ಲದೇ ಗುರುಬಸವ ಹೊಳಗುಂದಿಗೆ ನಮ್ಮ ಪಕ್ಷದಲ್ಲಿ ಯಾವುದೇ ಹುದ್ದೆಯಲ್ಲಿಲ್ಲ. ಪಕ್ಷದಿಂದ ಅವರ ಮೇಲೆ ಏನು ಕ್ರಮವಾಗಬೇಕೋ ಅದನ್ನು ಪಕ್ಷದ ಅಧ್ಯಕ್ಷರು ಕೈಗೊಳ್ಳುತ್ತಾರೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.