ಕೊಪ್ಪಳ: ಕೊರೊನಾ ಲಾಕ್ಡೌನ್ ಸಂಕಷ್ಟದ ನಡುವೆ ತಾಲೂಕಿನ ದೇವಸ್ಥಾನಗಳಲ್ಲಿ ಸೇವೆಯಲ್ಲಿರುವ 152 ಅರ್ಚಕರಿಗೆ ಸಂಸದ ಕರಡಿ ಸಂಗಣ್ಣ ಕರಡಿ ದಿನಸಿ ಕಿಟ್ ವಿತರಿಸಿದರು.
ಕೊಪ್ಪಳದ ಹುಲಿಗಿ ಶ್ರೀ ಹುಲಿಗೆಮ್ಮ ದೇವಸ್ಥಾನ ಟ್ರಸ್ಟ್ ಕಮಿಟಿ ಜಿಲ್ಲಾಧಿಕಾರಿಗಳಿಗೆ ನೀಡಿದ ಅನುದಾನಲ್ಲಿ ಜಿಲ್ಲೆಯಲ್ಲಿರುವ ದೇವಸ್ಥಾನಗಳ ಅರ್ಚಕರಿಗೆ ದಿನಸಿ ವಿತರಿಸಲಾಗುತ್ತಿದೆ.
ಈ ಕುರಿತು ಕೊಪ್ಪಳ ಸಂಸದ ಸಂಗಣ್ಣ ಕರಡಿ ಪ್ರತಿಕ್ರಿಯಿಸಿ, ಕೊವಿಡ್-19 ವೈರಸ್ ನಿಯಂತ್ರಣದಲ್ಲಿ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಗಲಿರುಳು ಕಾರ್ಯನಿರ್ವಹಿಸಿ ವೈರಸ್ ಕೊಪ್ಪಳಕ್ಕೆ ಬರದಂತೆ ತಡೆದಿದ್ದಾರೆ ಎಂದರು. ಈ ವೇಳೆ ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟಿಲ್ ಸೇರಿದಂತೆ ಇತರರಿದ್ದರು.