ಕೊಪ್ಪಳ(ಗಂಗಾವತಿ): ಮಕ್ಕಳಿಗೆ ಮೋಹಿನಿ ಅಟ್ಟಂ ನೃತ್ಯ ಮಾದರಿ ಪರಿಚಯಿಸುವ ಕಾರ್ಯಕ್ರಮವನ್ನು ಇಲ್ಲಿನ ಎಂಎನ್ಎಂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯ ವಿಭಾಗದಲ್ಲಿ ಆಯೋಜಿಸಲಾಗಿತ್ತು.
ದಾವಣಗೆರೆ ಜಿಲ್ಲೆಯ ಸರ್ಕಾರೇತರ ಸಂಸ್ಥೆಯೊಂದದ ಮುಖ್ಯಸ್ಥೆ ಮಂಜುಳಾ ಮಕ್ಕಳಿಗೆ ಕೇರಳದ ಮುಖ್ಯ ನೃತ್ಯ ಪ್ರಕಾರಗಳಲ್ಲಿ ಒಂದಾದ ಮೋಹಿನಿ ಅಟ್ಟಂ ನೃತ್ಯ ಪ್ರದರ್ಶಿಸಿ ಕಲೆ ಪರಿಚಯಿಸಿದರು. ಈ ಬಗ್ಗೆ ಮಾತನಾಡಿದ ಕಲಾವಿದೆ ಮಂಜುಳಾ, ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಏಳು ಶಾಲೆಯಲ್ಲಿ ನೃತ್ಯ ಪ್ರದರ್ಶನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ಗಂಗಾವತಿಯ ನಾಲ್ಕು ಶಾಲೆಯಲ್ಲಿ ಪ್ರದರ್ಶನ ನೀಡಲಾಗುತ್ತಿದೆ ಎಂದರು.
ಈ ಪ್ರಕಾರದ ನೃತ್ಯ ವೈಭವದ ಬಗ್ಗೆ ಮಕ್ಕಳಿಗೆ ತಿಳಿದುಕೊಳ್ಳಲು ಇದು ಸಹಕಾರಿಯಾಗುತ್ತೆ ಅಂತಾ ಗಂಗಾವತಿ ಬಿಇಒ ಸೋಮಶೇಖರ್ ಗೌಡ ಹೇಳಿದ್ದಾರೆ.