ಕೊಪ್ಪಳ: ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಮೊಹರಂ ಆಚರಣೆ ಹಿನ್ನೆಲೆಯಲ್ಲಿ ಪ್ರಾಣಿಗಳಿಗೆ ದೊಡ್ಡ ಗಾತ್ರದ ಮರದ ದಿಮ್ಮಿಗಳನ್ನು ಎಳೆಸಲಾಗಿದೆ. ಹಬ್ಬದ ಆಚರಣೆ ಸಲುವಾಗಿ ನಡೆಯುವ ಇಂಥ ಕಂದಾಚರಣೆಗಳು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಮೊಹರಂ ಆಚರಣೆಗಾಗಿ ಬೃಹತ್ ಗಾತ್ರದ ಮರದ ತುಂಡುಗಳನ್ನು ಎತ್ತುಗಳಿಗೆ ಕಟ್ಟಿ ಎಳೆಸಲಾಗಿದೆ. ಸುಮಾರು ಅರ್ಧ ಕಿಲೋಮೀಟರ್‌ನಷ್ಟು ದೂರದಿಂದ ಮರದ ದಿಮ್ಮಿಗಳನ್ನು ಎತ್ತುಗಳಿಂದ ಎಳೆಸಿಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಲ್ಲದೆ, ಆಚರಣೆ ಹೆಸರಿನಲ್ಲಿ ನೂರಾರು ಮರಗಳನ್ನು ಕಡಿದು ಹಾಕಲಾಗಿದೆ. ಅತೀ ಭಾರವಾದ ಮರದ ದಿಮ್ಮಿಗಳನ್ನು ಎತ್ತುಗಳಿಗೆ ಕಟ್ಟಿ ಎಳೆಸಿ ಅವುಗಳಿಗೆ ಹಿಂಸೆ ನೀಡಿದ್ದರೂ, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಪ್ರಾಣಿಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.