ETV Bharat / state

ಮೊಬೈಲ್ ಕಳ್ಳತನ: ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು - Ganagavathi mobile theft news

ವಿಕಲಾಂಗ ವ್ಯಕ್ತಿಯೋರ್ವ ತನ್ನ ಮೊಬೈಲ್​ ಕಳ್ಳತನವಾದ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದಾಗ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.

Mobile theft
ಮೊಬೈಲ್ ಕಳ್ಳತನ
author img

By

Published : Sep 3, 2020, 8:49 PM IST

ಗಂಗಾವತಿ: ವಿಕಲಾಂಗ ವ್ಯಕ್ತಿಯೋರ್ವ ತನ್ನ ಮೊಬೈಲ್​ ಕಳ್ಳತನವಾದ ಬಗ್ಗೆ ಪೊಲೀಸರಿಗೆ ದೂರು ನೀಡಲು ನಗರ ಠಾಣೆಗೆ ಆಗಮಿಸಿದರೆ, ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಘಟನೆ ನಡೆದಿದೆ.

ನಗರದ ಅಶೋಕ ವೆಂಕಪ್ಪ ಎಂಬ ವಿಕಲಾಂಗ ವ್ಯಕ್ತಿಯ ಮೊಬೈಲ್​ ಸೆ.1ರಂದು ಕಳುವಾಗಿದೆ. ಈ ಬಗ್ಗೆ ವಿಕಲಾಂಗ ವ್ಯಕ್ತಿ, ದೂರಿನ ಅರ್ಜಿ ನೋಟರಿ ಮಾಡಿಸಿದ ಪ್ರತಿಗಳನ್ನು ಹಿಡಿದು ಪೊಲೀಸ್ ಠಾಣೆಗೆ ಆಗಮಿಸಿದ್ದರು. ಆದರೆ ಪೊಲೀಸರು ಮೊಬೈಲ್ ಕಳ್ಳತನವಾಗಿದ್ದರ ಬಗ್ಗೆ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಬದಲಿಗೆ ಮೊಬೈಲ್ ಕಳೆದಿದೆ ಎಂದು ಅರ್ಜಿ ಕೊಟ್ಟರೆ ಮಾತ್ರ ದೂರು ದಾಖಲಿಸಿಕೊಳ್ಳುವುದಾಗಿ ವ್ಯಕ್ತಿಯನ್ನು ಅಲೆದಾಡಿಸಿದ್ದಾರೆ ಎಂದು ತಿಳಿದು ಬಂದಿದೆ.

Complaint letter
ದೂರು ನೀಡಿದ ವ್ಯಕ್ತಿ

ಇದೀಗ ಅಶೋಕ ವೆಂಕಪ್ಪ ಪೊಲೀಸರ ಸೂಚನೆ ಮೇರೆಗೆ ತನ್ನ ಮೊಬೈಲ್ ಕಳ್ಳತನವಾಗಿದೆ ಎಂಬುವುದರ ಬದಲಿಗೆ 'ಕಳೆದಿದೆ' ಎಂದು ಅರ್ಜಿ ಕೊಟ್ಟಿದ್ದಾರೆ. ಸಕಾರಣವಿಲ್ಲದೇ ಪೊಲೀಸರು ಹೀಗೆ ಸತಾಯಿಸುವುದಕ್ಕೆ ಜನಸಾಮಾನ್ಯರು ಠಾಣೆಯ ಮೆಟ್ಟಿಲೇರುವುದು ಕಷ್ಟಕರವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.