ಕುಷ್ಟಗಿ: ನಿಮ್ಮೂರಿನ ಶಾಸಕರಾದ ಬಯ್ಯಾಪೂರ ಅವರು, ಅಧ್ಯಕ್ಷರೇ ನಮ್ಮ ಕೆಲಸ ಮಾಡಿಕೊಡಿ ಎಂದು ಕೇಳುವುದಿಲ್ಲ. ಬದಲಿಗೆ ಲೇ ರಾಜಾ ಮಾಡ್ತೀಯೋ ಇಲ್ಲಲೇ.. ಅಂತ ಎಷ್ಟು ರೌಡಿಸಂ ಮಾಡ್ತಾರೆ ಎಂದು ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ, ಸುರಪುರ ಶಾಸಕ ರಾಜೂಗೌಡ ಹಾಸ್ಯ ಚಟಾಕಿ ಸಿಡಿಸಿದ್ದಾರೆ.
ಕುಷ್ಟಗಿ ತಾಲೂಕಿನ ತಾವರಗೇರಾ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ 88.16 ಕೋಟಿ ರೂ. ಯೋಜನಾ ವೆಚ್ಚದಲ್ಲಿ ತುರುವಿಹಾಳ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ಸರಬರಾಜು ಕಲ್ಪಿಸುವ ಯೋಜನೆಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಯ್ಯಾಪೂರ ಅವರಿಗೆ ನನ್ನ ಮೇಲೆ ಅಷ್ಟೊಂದು ಪ್ರೀತಿ ವಿಶ್ವಾಸವಿದೆ. ಅವರು ಏನ್ರೀ ರಾಜು ಆರಾಮಾ ಎಂದರೆ ಏನೋ ಒಂದು ಥರ ಅನ್ನುಸುತ್ತಿದೆ. ಏನ್ಲೇ ರಾಜ ಎಂದರೆ ಖುಷಿ ಆಗುತ್ತೇ ಎಂದು ಹೇಳಿದರು. ಕರ್ನಾಟಕ ನಗರ ನೀರು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ನಿರಾಕರಿಸಿದ್ದೆ, ಆದರೆ ಶಾಸಕ ಬಯ್ಯಾಪೂರ ಅವರು, ತಾವರಗೇರಾ ಪಟ್ಟಣಕ್ಕೆ ನೀರು ಸರಬರಾಜು ಯೋಜನೆಗೆ ಚಾಲನೆ ನೀಡುವವರೆಗೂ ರಾಜೀನಾಮೆ ನೀಡಬೇಡ ಎಂದಿದ್ದರು. ಶಾಸಕ ಬಯ್ಯಾಪೂರ ಅವರು ಕಾಂಗ್ರೆಸ್ ಶಾಸಕರು ನೀಡಿದ ಸಲಹೆಯಿಂದ ಕರ್ನಾಟಕ ರಾಜ್ಯ ನಗರ ನೀರು ಹಾಗೂ ಒಳ ಚರಂಡಿ ಮಂಡಳಿ ಅಧ್ಯಕ್ಷನಾಗಿ ಮುಂದುವರೆದಿರುವೆ ಎಂದು ಇದೇ ವೇಳೆ ಹೇಳಿದ್ದಾರೆ.
ಓದಿ : ಪಂಚರಾಜ್ಯಗಳಲ್ಲಿ ಸೋತು ಸುಣ್ಣವಾದ ಕಾಂಗ್ರೆಸ್.. ನಾಳೆ ಪಕ್ಷದ ಕಾರ್ಯಕಾರಿ ಸಮಿತಿ ಸಭೆ