ETV Bharat / state

ಗಂಗಾವತಿಯಿಂದ ನಾನು ಕಣಕ್ಕಿಳಿಯುವುದು ನಿಶ್ಚಿತ: ಶಾಸಕ ಪರಣ್ಣ ಮುನವಳ್ಳಿ

ಈ ಬಾರಿ ನಾನೇ ಗಂಗಾವತಿಯಿಂದ ಕಣಕ್ಕಿಳಿಯಲಿದ್ದೇನೆ. ಈ ಬಗ್ಗೆ ಯಾರಿಗೂ ಸಂಶಯ ಬೇಡ- ಪರಣ್ಣ ಮುನವಳ್ಳಿ

mla-paranna-munavalli-talks-about-2023-assembly-elections
ಗಂಗಾವತಿ ಕ್ಷೇತ್ರದಿಂದ ನಾನು ಕಣಕ್ಕಿಳಿಯುವುದು ನಿಶ್ಚಿತ: ಶಾಸಕ ಪರಣ್ಣ ಮುನವಳ್ಳಿ
author img

By

Published : Dec 9, 2022, 6:55 PM IST

ಗಂಗಾವತಿ(ಕೊಪ್ಪಳ): ನಾನು ಬಿಜೆಪಿಯ ಹಾಲಿ ಶಾಸಕನಾಗಿದ್ದು 2023ರ ವಿಧಾನಸಭಾ ಚುನಾವಣೆಗೆ ಗಂಗಾವತಿ ಕ್ಷೇತ್ರದಿಂದ ಕಣಕ್ಕಿಳಿಯುವುದು ನಿಶ್ಚಿತ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ರೆಡ್ಡಿಯವರು ಯಾವ ಕಾರಣಕ್ಕೆ ತಮ್ಮ ನೆಲೆಯನ್ನು ಗಂಗಾವತಿಗೆ ಬದಲಿಸಿದ್ದಾರೋ ಗೊತ್ತಿಲ್ಲ ಎಂದರು.

ನಾನು ಪಕ್ಷದ ನಿರ್ಧಾರಕ್ಕೆ ಬದ್ಧ, ಶಿಸ್ತಿನ ಕಾರ್ಯಕರ್ತ. ಗಂಗಾವತಿಯಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬುವುದರ ಬಗ್ಗೆ ಪಕ್ಷ ನಿರ್ಣಯ ಕೈಗೊಳ್ಳುತ್ತದೆ. ನಾನು ಈಗಾಗಲೇ ಎರಡು ಬಾರಿ ಶಾಸಕನಾಗಿದ್ದೇನೆ. ಈ ಬಾರಿಯೂ ನಾನೇ ಸ್ಪರ್ಧಿಸಲಿದ್ದೇನೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಹೇಳಿದರು.

ಗಂಗಾವತಿ ಕ್ಷೇತ್ರದಿಂದ ನಾನು ಕಣಕ್ಕಿಳಿಯುವುದು ನಿಶ್ಚಿತ: ಶಾಸಕ ಪರಣ್ಣ ಮುನವಳ್ಳಿ

ಜನಾರ್ದನ ರೆಡ್ಡಿ ಇತ್ತೀಚೆಗೆ ಗಂಗಾವತಿಗೆ ಭೇಟಿ ನೀಡಿ ಓಡಾಡುತ್ತಿರುವುದು ಗಮನಿಸಿದ್ದೇನೆ. ಅವರೂ ಒಂದು ಕಾಲದ ನಮ್ಮ ಪಕ್ಷದ ದೊಡ್ಡ ನಾಯಕ. ಹೀಗಾಗಿ ಅವರು ಬಂದಾಗ ನಮ್ಮ ಪಕ್ಷದ ಮುಖಂಡರು ಅಭಿಮಾನಕ್ಕಾಗಿ ಹೋಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಗುಜರಾತ್​ನಲ್ಲಿ ಹೊಸ ಸರ್ಕಾರ: ವೀಕ್ಷಕರಾಗಿ ರಾಜನಾಥ್, ಯಡಿಯೂರಪ್ಪ ಸೇರಿ ಮೂವರ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.