ETV Bharat / state

'ರಾಜ್ಯಸಭೆ ಆಯ್ಕೆ ವಿಚಾರವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಆಯ್ಕೆಗೆ ತಾಳೆ ಹಾಕಬೇಡಿ' - ನಗರಾಭಿವೃದ್ಧಿ ಪ್ರಾಧಿಕಾರ ಕುರಿತು ಮುನವಳ್ಳಿ ಹೇಳಿಕೆ

ರಾಜ್ಯಸಭೆಗೆ ಸಾಮಾನ್ಯ ಕಾರ್ಯಕರ್ತನನ್ನು ಆಯ್ಕೆ ಮಾಡಿದ ಹಾಗೆಯೇ ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ಆಯ್ಕೆ ನಡೆಯುತ್ತದೆ ಎನ್ನಲಾಗುವುದಿಲ್ಲ. ಪಕ್ಷಕ್ಕೆ ದುಡಿದವರನ್ನು ಹಿರಿತನ ಮತ್ತು ಸೇವೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಶಾಸಕ ಮುನವಳ್ಳಿ ಗಂಗಾವತಿಯಲ್ಲಿ ತಿಳಿಸಿದ್ದಾರೆ.

mla munavalli reaction about upper house candidates
ಶಾಸಕ ಮುನವಳ್ಳಿ ಹೇಳಿಕೆ
author img

By

Published : Jun 9, 2020, 3:48 PM IST

ಗಂಗಾವತಿ: ರಾಜ್ಯಸಭೆಗೆ ಸಾಮಾನ್ಯ ಕಾರ್ಯಕರ್ತನನ್ನು ಆಯ್ಕೆ ಮಾಡಿ ಪಕ್ಷ ತನ್ನ ನಿಲುವು ಸ್ಪಷ್ಡಪಡಿಸಿದೆ. ಆದರೆ ಇದೇ ವಿಚಾರವನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ತಾಳೆ ಹಾಕಬೇಡಿ ಎಂದು ಶಾಸಕ ಮುನವಳ್ಳಿ ಪತ್ರಕರ್ತರ ಕಾಲೆಳೆದರು.

ಶಾಸಕ ಮುನವಳ್ಳಿ ಹೇಳಿಕೆ

ನಗರದ ಅಭಿವೃದ್ಧಿ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಶಾಸಕ ಮುನವಳ್ಳಿಯವರಿಗೆ, ರಾಜ್ಯಸಭೆ ಮುಗೀತು, ಇನ್ನು ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಗರ ಪ್ರಾಧಿಕಾರ ಸಾಮಾನ್ಯ ಕಾರ್ಯಕರ್ತರಿಗೆ ಚಾನ್ಸ್​ ಕೊಡುತ್ತಿರೋ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಾಸಕ, ರಾಜ್ಯಸಭೆಗೆ ಸಾಮಾನ್ಯರನ್ನು ಆಯ್ಕೆ ಮಾಡುವ ಮೂಲಕ ಪಕ್ಷ ತನ್ನ ನಿಲುವು ಸ್ಪಷ್ಟಪಡಿಸಿದೆ. ನಗರ ಯೋಜನಾ ಪ್ರಾಧಿಕಾರಕ್ಕೂ ಸೂಕ್ತ ವ್ಯಕ್ತಿಯನ್ನು ಶೀಘ್ರ ಆಯ್ಕೆ ಮಾಡಲಾಗುವುದು. ಪಕ್ಷಕ್ಕೆ ದುಡಿದವರನ್ನು ಹಿರಿತನ ಮತ್ತು ಸೇವೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.