ಗಂಗಾವತಿ: ನಿಮ್ಮಿಂದ ಉತ್ತಮ ಆಡಳಿತವನ್ನು ನಾವೆಲ್ಲರೂ ನಿರೀಕ್ಷಿಸಿದ್ದೇವೆ ಎಂದು ನೂತನ ಜಿಲ್ಲಾಧಿಕಾರಿ ಸುರಾಳ್ಕರ್ ವಿಕಾಸ್ ಕಿಶೋರ್ ಅವರಿಗೆ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.
![New DC suralkar vikas kishor](https://etvbharatimages.akamaized.net/etvbharat/prod-images/07:27:13:1594130233_kn-gvt-01-07-we-expectng-preivious-dc-working-style-pic-kac10005_07072020173204_0707f_1594123324_271.jpg)
ಗಂಗಾವತಿ ವಿಧಾನಸಭಾ ಕ್ಷೇತ್ರದ ಜನರ ಪರವಾಗಿ ನೂತನ ಜಿಲ್ಲಾಧಿಕಾರಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ಬಳಿಕ ಮಾತನಾಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹಣಕಾಸು ಮತ್ತು ತಾಂತ್ರಿಕ ಶಾಖೆಯ ವಿಶೇಷ ಆಯುಕ್ತರಾಗಿ ವರ್ಗಾವಣೆಯಾದ ಪಿ. ಸುನಿಲ್ ಕುಮಾರ ಜಿಲ್ಲೆಯಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ಹೆಸರು ಮಾಡಿದ್ದಾರೆ.
ಇದೇ ಮಾದರಿಯ ಕಾರ್ಯಶೈಲಿ, ಆಡಳಿತ, ಚುರುಕುತನದ ಸ್ಪಂದನೆಯನ್ನು ಜಿಲ್ಲೆಯ ಜನರು, ಮುಖ್ಯವಾಗಿ ರಾಜಕಾರಣಿಗಳು ನಿರೀಕ್ಷಿಸುತ್ತೇವೆ. ನಿಮಗೆ ಆಡಳಿತಾತ್ಮಕವಾಗಿ ಯಾವುದೇ ಸಹಕಾರ ನೀಡಲು ಸಿದ್ಧ ಎಂದು ಶಾಸಕರು, ನೂತನ ಜಿಲ್ಲಾಧಿಕಾರಿ ಸುರಾಳ್ಕರ್ ವಿಕಾಸ್ ಕಿಶೋರ್ ಅವರಿಗೆ ಹೇಳಿದರು.
ರಾಜಕಾರಣಿಗಳಿರಬಹುದು ಅಥವಾ ಜನರಿಬಹುದು ನಿರೀಕ್ಷಿಸುವುದು ಕೇವಲ ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯನ್ನು. ಈ ನಿಟ್ಟಿನಲ್ಲಿ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಕೂಡಿ ಜಿಲ್ಲೆಯ ಅಭಿವೃದ್ಧಿಗೆ ಪ್ರಮಾಣಿಕ ಯತ್ನ ಮಾಡೋಣ. ಈ ಹಿಂದಿನ ಜಿಲ್ಲಾಧಿಕಾರಿ ಕೊರೊನಾದಂತಹ ಪರಿಸ್ಥಿತಿ ನಿಭಾಯಿಸಿ ಜನ ಮನ್ನಣೆಗೆ ಪಾತ್ರವಾಗಿದ್ದಾರೆ. ಇದೇ ಮಾದರಿ ಆಡಳಿತ ನಿಮ್ಮಿಂದ ನಿರೀಕ್ಷಿಸುತ್ತೇವೆ ಎಂದು ಶಾಸಕರು ಹೇಳಿದರು.