ಗಂಗಾವತಿ (ಕೊಪ್ಪಳ): ಗದ್ದೆ ಒಣಗುತ್ತಿವೆ ನೀರು ಬಿಡಿ ಅಂತ ಯಾರೋ ಅಲ್ಪಸ್ವಲ್ಪ ಜ್ಞಾನ ಇರುವ ಕೆಲಸಕ್ಕೆ ಬಾರದ ಹುಡುಗಬಟ್ಟೆಗಳು ಮಾಡುವ ಪ್ರತಿಭಟನೆಗೆ ನಾವು ಗಮನ ಕೊಡಬೇಕಿಲ್ಲ ಎಂದು ಕಾಂಗ್ರೆಸ್ ಮುಖಂಡರಿಗೆ ಶಾಸಕ ಬಸವರಾಜ ದಡೇಸುಗೂರು ಪರೋಕ್ಷವಾಗಿ ಕಾಲೆಳೆದಿದ್ದಾರೆ.
ಕಾಲುವೆ ವೀಕ್ಷಣೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಲುವೆಗೆ ನೀರು ಯಾವ ಸಂದರ್ಭದಲ್ಲಿ ಎಷ್ಟು ಪ್ರಮಾಣದಲ್ಲಿ ಬಿಡಬೇಕು. ಹೇಗೆ ರೈತರನ್ನು ಮತ್ತು ಅವರ ಬೆಳೆ ರಕ್ಷಿಸಿಕೊಳ್ಳಬೇಕು ಎಂಬುವುದರ ಬಗ್ಗೆ ಆಡಳಿತ ನಡೆಸುವ ನಮಗೆ ಹಾಗೂ ಅಧಿಕಾರಿಗಳಿಗೆ ಸ್ಪಷ್ಟವಾಗಿ ಗೊತ್ತಿದೆ.
ಆದರೆ ಏನೂ ಕೆಲಸ ಇಲ್ಲದ ಕೆಲ ಹುಡುಗಬಟ್ಟೆಗಳು ಸೇರಿ ನೀರಿಲ್ಲ ನೀರಿಲ್ಲ ಎಂದು ತುಗಭದ್ರಾ ನದಿಗೆ ಹೋಗಿ ನಾನಾ ಭಂಗಿಯಲ್ಲಿ ಆ್ಯಕ್ಷನ್ ಚಿತ್ರಗಳು ತೆಗೆಯಿಸಿಕೊಂಡರೆ ಪ್ರಚಾರಕ್ಕಾಗಿ ಪ್ರತಿಭಟನೆ ಮಾಡಿದ್ದಾರೆ ಎಂದಿದ್ದಾರೆ.
ನೀರಿನ ವಿಚಾರಕ್ಕೆ ನಾವಾಗಲಿ ನಮ್ಮ ಅಧಿಕಾರಿಗಳಾಗಲಿ ಸದಾ ಜಾಗೃತರಾಗಿದ್ದು, ಎಷ್ಟು ನೀರು ಬಿಡಬೇಕು ಎಂಬುವುದು ಬಗ್ಗೆ ಅರಿವಿದೆ ಎಂದಿದ್ದಾರೆ.