ಗಂಗಾವತಿ: ಕನಕಗಿರಿ ಕ್ಷೇತ್ರ ಮಾತ್ರವಲ್ಲ ಇಡೀ ರಾಜ್ಯದಿಂದಲೇ ಕೊರೊನಾ ಮಹಾಮಾರಿ ತೊಲಗಬೇಕು ಎಂದು ಪ್ರಾರ್ಥಿಸಿ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸೂಗೂರು ಧನ್ವಂತರಿ ಹೋಮ ಮಾಡಿಸಿದರು.
ಕೊಪ್ಪಳ ಜಿಲ್ಲೆಯಲ್ಲಿಯೇ ಕೊರೊನಾದ ಹಾಟ್ಸ್ಪಾಟ್ ಎಂದು ಗುರುತಿಸಿಕೊಂಡಿರುವ ಗಂಗಾವತಿ ತಾಲೂಕಿನ ಶ್ರೀರಾಮನಗರದ (ಕನಕಗಿರಿ ಕ್ಷೇತ್ರ) ವೆಂಕಟೇಶ್ವರ ದೇಗುಲದಲ್ಲಿ ಧನ್ವಂತರಿ ಹೋಮ ನಡೆಯಿತು. ಪತ್ನಿ ಸರೋಜಮ್ಮ, ಪುತ್ರಿ ನಾಗರತ್ನ, ಪುತ್ರರಾದ ಮೌನೇಶ, ಸುರೇಶ, ಚಂದ್ರು ಸಮೇತ ಹೋಂ ಹವನ ನಡೆಸಿದರು. ಹೋಮ ಕುಂಡಕ್ಕೆ ಕೊರೊನಾ ಮಾದರಿ ಆಕೃತಿ ರಚಿಸಿ ಅಗ್ನಿಗೆ ಆಹುತಿ ನೀಡಲಾಯಿತು.