ಕುಷ್ಟಗಿ (ಕೊಪ್ಪಳ): ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರ ಮಧ್ಯೆ ನಡೆದ ಘರ್ಷಣೆ ನಡೆದಿದ್ದು, ಈ ವೇಳೆ ನಮ್ಮ 20 ಸೈನಿಕರು ಹುತಾತ್ಮರಾಗಿದ್ದಾರೆ. ಇಂತಹ ಸನ್ನಿವೇಶದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಯಾವುವೇ ವಿಚಾರವನ್ನ ಬಹಿರಂಗ ಪಡಿಸದೇ ಮೌನ ವಹಿಸುತ್ತಿರುವುದು ಸರಿಯಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅಸಮಾಧಾನ ಹೇಳಿದ್ದಾರೆ.
ಕಾರ್ಗಿಲ್ ವೀರಯೋಧ ಮಲ್ಲಯ್ಯ ವೃತ್ತದಲ್ಲಿ ಭಾರತ-ಚೀನಾ ಸೈನಿಕರ ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ಅವರು, ಭಾರತ-ಚೀನಾ ಘರ್ಷಣೆ ಸಮಾಚಾರವನ್ನ ಮಾಧ್ಯಮದವರೇ ಪ್ರಕಟಿಸುತ್ತಿದ್ದು, ಪ್ರಧಾನಿ ಮೋದಿ ಈ ಬಗ್ಗೆ ಒಂದು ಮಾತು ಸಹ ಆಡುತ್ತಿಲ್ಲ. ಈ ವಿಚಾರವನ್ನ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿಯರು ಹೇಳಬೇಕು. ಪ್ರಸ್ತುತ ಸನಿವೇಶದಲ್ಲಿ ಏನೋ ಯಡವಟ್ಟಾಗಿದೆ. ನಮ್ಮ ದೇಶದ ವಿರುದ್ಧ ನಮ್ಮ ಸುತ್ತಮುತ್ತಲಿನ ರಾಷ್ಟ್ರಗಳು ತಿರುಗಿ ಬೀಳುತ್ತಿವೆ. ಚೀನಾ-ಪಾಕಿಸ್ತಾನ, ಇನ್ನೊಂದೆಡೆ ನೇಪಾಳ ಸಹ ತಿರುಗಿ ಬಿದ್ದಿದೆ. ನೆಹರು, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಅವರು ಇಂತಹ ಸಂದರ್ಭಗಳಲ್ಲಿ ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥಗೊಳಿಸುತ್ತಿದ್ದರು. ಈಗ ಮೋದಿಯವರು ಮೌನ ಮುರಿಯಬೇಕಿದೆ ಎಂದರು.
ಚೀನಾದವರು ಯುದ್ಧ ಟ್ಯಾಂಕರ್ಗಳನ್ನ ಭಾರತದ ಗಡಿಯತ್ತ ನುಗ್ಗಿಸುತ್ತಿರುವುದು ಮಾಧ್ಯಮದಿಂದ ಗೊತ್ತಾಗುತ್ತಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ, ದೇಶದ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ನಮ್ಮ ಪಕ್ಷದವರು ರಾಜಕೀಯ ಮಾಡದೆ, ಪ್ರಧಾನಿಯವರು ತೆಗೆದುಕೊಳ್ಳುವ ನಿರ್ಣಯಗಳನ್ನು ಬೆಂಲಿಸುತ್ತೇವೆ ಎಂದರು.