ETV Bharat / state

ಕೊಪ್ಪಳ; ಏತ ನೀರಾವರಿ ಕಾಮಗಾರಿ ವೇಗಕ್ಕೆ ಶಾಸಕರ ಸೂಚನೆ

ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ಏತ ನೀರಾವರಿ ಕಾಮಗಾರಿಯನ್ನು ಶಾಸಕ ಅಮರೇಗೌಡ ಪಾಟೀಲ್​ ಬಯ್ಯಾಪೂರ ಪರಿಶೀಲಿಸಿದರು.

dfsdd
ಏತ ನೀರಾವರಿ ಕಾಮಗಾರಿ ವೇಗಕ್ಕೆ ಶಾಸಕ ಅಮರೇಗೌಡ ಪಾಟೀಲ್​ ಬಯ್ಯಾಪೂರ ಸೂಚನೆ
author img

By

Published : Jul 9, 2020, 11:50 PM IST

ಕುಷ್ಟಗಿ/ಕೊಪ್ಪಳ: ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ತಾಲೂಕಿನ ಕೊಪ್ಪಳ ಏತ ನೀರಾವರಿ ಯೋಜನೆಯ ಕಲಾಲಬಂಡಿ ಡೆಲಿವರಿ ಚೇಂಬರ್​​ ಬಳಿ ನಿರ್ಮಿಸುತ್ತಿರುವ ಜಾಕವೆಲ್ 3ನೇ ಬ್ರ್ಯಾಂಚ್ (ಕುಷ್ಟಗಿ, ಯಲಬುರ್ಗಾ, ಕನಕಗಿರಿ) ಕಾಮಗಾರಿಯನ್ನು ಶಾಸಕ ಅಮರೇಗೌಡ ಪಾಟೀಲ್​ ಬಯ್ಯಾಪೂರ ಪರಿಶೀಲಿಸಿದರು.

ಏತ ನೀರಾವರಿ ಕಾಮಗಾರಿ ವೇಗಕ್ಕೆ ಶಾಸಕ ಅಮರೇಗೌಡ ಪಾಟೀಲ್​ ಬಯ್ಯಾಪೂರ ಸೂಚನೆ

ಕಾಮಗಾರಿ ವಿಳಂಬಗತಿಯಲ್ಲಿದ್ದು, ಇನ್ನಷ್ಟು ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿಯ ವೇಗ ಹೆಚ್ಚಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಈ ಕಾಮಗಾರಿ ಜೊತೆಯಲ್ಲಿ ಜಾಕವೆಲ್​ಗೆ ವಿದ್ಯುತ್ ಪೂರೈಕೆಗಾಗಿ ಆ ಕಾರ್ಯ ಕೈಗೆತ್ತಿಕೊಳ್ಳಲು ಇಂಜಿನಿಯರ್​ಗೆ ಕರೆ ಮಾಡಿ ಸೂಚಿಸಿದರು.

ಉದ್ದೇಶಿತ ಜಾಕವೆಲ್ ಯೋಜನೆಯಡಿ ನೀರನ್ನು ಏರುಕೊಳವೆ ಮೂಲಕ ಹರಿಸಿ ಕೆರೆಗಳನ್ನು ತುಂಬಿಸುವ ಈ ಯೋಜನೆ ಕಾಮಗಾರಿಯ ಅನುಷ್ಠಾನಕ್ಕೆ ತ್ವರಿತಗತಿಯ ಕ್ರಮ ಕೈಗೊಳ್ಳಬೇಕು ಎಂದರು. ಕಾಮಗಾರಿ ಸ್ಥಳದಲ್ಲಿದ್ದ ಮರಳು ಸರಿ ಇಲ್ಲದ ಕಾರಣ ಆ ಮರಳನ್ನು ಕಾಮಗಾರಿಗೆ ಬಳಸದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.