ಕೊಪ್ಪಳ: ಈ ಬಾರಿ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಮ್ಮ ಜಿಲ್ಲೆಗೆ ಒಂದು ಸ್ಥಾನ ಖಚಿತವಾಗಿ ಸಿಗುತ್ತದೆ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸುಗೂರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾನು ಸಿಎಂ ಭೇಟಿ ಮಾಡಿದಾಗ ಜಿಲ್ಲೆಗೆ ಒಂದು ಒಳ್ಳೆ ಗಿಫ್ಟ್ ಕೊಡುತ್ತೇನೆ ಎಂದು ಹೇಳಿದ್ದಾರೆ. ಯಾರಿಗೆ ಕೊಡಬೇಕು ಎಂಬುದು ಸಿಎಂಗೆ ಬಿಟ್ಟದ್ದು. ಹಿರಿತನ, ಕಿರಿತನ ಆಧಾರವಾಗಿಟ್ಟುಕೊಂಡು ಸಿಎಂ ನಿರ್ಧಾರ ಮಾಡುತ್ತಾರೆ. ಈ ಹಿಂದೆ ನಿಗಮ ಮಂಡಳಿ ನೇಮಕಾತಿಯಲ್ಲಿ ಕೆಲ ತಾಂತ್ರಿಕ ತೊಂದರೆಯಾಗಿತ್ತು. ಈ ಬಾರಿ ನಿಗಮ ಮಂಡಳಿಗೆ ನೇಮಕವಾಗಬಹುದು.
ಅವರು ಸ್ಥಾನ ಕೊಟ್ಟರೆ ತೆಗೆದುಕೊಳ್ಳುತ್ತೇವೆ. ಕೊಡದಿದ್ದರೂ ಕೆಲಸ ಮಾಡುತ್ತೇವೆ. ಅದೃಷ್ಟವಿದ್ದರೆ ನಾನೂ ಸಹ ಮಂತ್ರಿಯಾಗಬಹುದು. ಅದಕ್ಕೆ ಟೈಂ ತೆಗೆದುಕೊಳ್ಳುತ್ತೆ. ದಾರಿ ತಪ್ಪಿಸಬಹುದು, ಆದರೆ ಅದೃಷ್ಟ ತಪ್ಪಿಸಲು ಆಗುವುದಿಲ್ಲ ಎಂದರು.