ETV Bharat / state

ಬಿಟ್‌ಕಾಯಿನ್‌ ಬಗ್ಗೆ ಕಾಂಗ್ರೆಸ್​​ ಆರೋಪ ನಿರಾಧಾರ: ಸಚಿವ ಹಾಲಪ್ಪ ಆಚಾರ್ - ಬಿಟ್ ಕಾಯಿನ್ ಪ್ರಕರಣ

ಕಾಂಗ್ರೆಸ್​​​ನವರಿಗೆ ಮಾಡಲು ಬೇರೆ ಏನೂ ಕೆಲಸ ಇಲ್ಲ. ಹೀಗಾಗಿ ಬಿಟ್ ಕಾಯಿನ್ (Bitcoin) ಬಗ್ಗೆ ನಿರಾಧಾರ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ್ (Minister Halappa Achar) ಹೇಳಿದರು.

Minister Halappa Achar
ಸಚಿವ ಹಾಲಪ್ಪ ಆಚಾರ್
author img

By

Published : Nov 14, 2021, 2:15 PM IST

Updated : Nov 14, 2021, 2:30 PM IST

ಕುಷ್ಟಗಿ(ಕೊಪ್ಪಳ): ಬಿಟ್ ಕಾಯಿನ್ (Bitcoin) ಬಗ್ಗೆ ಕಾಂಗ್ರೆಸ್ ಪಕ್ಷದವರ ಬಳಿ ದಾಖಲೆ ಇದ್ದರೆ ಕಾನೂನು ಪ್ರಕಾರ ದೂರು ದಾಖಲಿಸಲಿ, ನ್ಯಾಯಾಲಯಕ್ಕೆ ಹೋಗಲಿ. ಅದಕ್ಕೆ ಈ ದೇಶದಲ್ಲಿ ಅವಕಾಶವಿದೆ ಎಂದು ಕೊಪ್ಪಳ-ಜಿಲ್ಲಾ ಉಸ್ತುವಾರಿ ಹಾಗು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ (Minister Halappa Achar)​​ ಹೇಳಿದರು.

ಕುಷ್ಟಗಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, ಇಲ್ಲಿನ ಸರ್ಕ್ಯೂಟ್ ಹೌಸ್​​​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್​​​ನವರಿಗೆ ಮಾಡಲು ಬೇರೆ ಏನೂ ಕೆಲಸ ಇಲ್ಲ. ಹೀಗಾಗಿ ಬಿಟ್ ಕಾಯಿನ್ ಬಗ್ಗೆ ನಿರಾಧಾರ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಜಗದೀಶ್​​ ಶೆಟ್ಟರ್ ದೆಹಲಿಗೆ ಹೋಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ತಮ್ಮ ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ ಹೋಗಿರುವುದಾಗಿ ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು. ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಈ ರಾಜ್ಯದ ಸಿಎಂ. ಹಲವಾರು ಕೆಲಸದ ನಿಮಿತ್ತ ದೆಹಲಿಗೆ ಹೋಗುತ್ತಾರೆ.

ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಹಲವಾರು ಕೆಲಸಗಳಿಗಾಗಿ ಕೇಂದ್ರದ ಮಂತ್ರಿಗಳನ್ನು, ಅಧಿಕಾರಿಗಳನ್ನು ಭೇಟಿಯಾಗಲು ದೆಹಲಿಗೆ ತೆರಳುವುದು ವಿಶೇಷವೇನಲ್ಲ. 2023 ರವರೆಗೆ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿರುತ್ತಾರೆ. ಅವರ ನೇತೃತ್ವದಲ್ಲಿಯೇ ನಾವು ಚುನಾವಣೆಗೆ ಎದುರಿಸುತ್ತೇವೆ ಎಂದರು.

ಈ ವೇಳೆ ಕೊಪ್ಪಳ‌ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಛಲವಾದಿ ಮಹಾಸಭಾ ಅಧ್ಯಕ್ಷ ಕೆ.ಶಿವರಾಮ್ ಹಾಜರಿದ್ದರು.

ಇದನ್ನೂ ಓದಿ: ಒಡಕು ರಾಜಕಾರಣ ಬಿಜೆಪಿಯ ನಿತ್ಯ ಕಾಯಕ, ಆಪರೇಷನ್ ಕಮಲ ಅಧಿಕೃತ ರಾಜಧರ್ಮ: ಹೆಚ್ಡಿಕೆ

Last Updated : Nov 14, 2021, 2:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.