ETV Bharat / state

"ತಂಗಡಗಿಯಂತಹ ಸತ್ಯ ಹರಿಶ್ಚಂದ್ರರು ಯಾರೂ ಇಲ್ಲ": ಸಚಿವ ಬಿ.ಸಿ ಪಾಟೀಲ್ ತಿರುಗೇಟು - ಶಿವರಾಜ್​ ತಂಗಡಗಿ ಹೇಳಿಕೆಗೆ ಬಿಸಿ ಪಾಟೀಲ್ ತಿರುಗೇಟು

ಉಸ್ತುವಾರಿ ಸಚಿವರು ಬಂದು ಒಂದು ದಿನ ವಸೂಲಿ ಮಾಡ್ತಾರೆ, ಇನ್ನೊಂದು ದಿನ ಮೀಟಿಂಗ್ ಮಾಡಿ ಹೋಗ್ತಾರೆ ಎಂಬ ಶಿವರಾಜ ತಂಗಡಗಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಬಿ.ಸಿ ಪಾಟೀಲ್, ಶಿವರಾಜ ತಂಗಡಗಿ ಈ ಹಿಂದೆ ಉಸ್ತುವಾರಿ ಸಚಿವರಿದ್ದಾಗ ಏನ್ ಮಾಡಿದ್ದಾರೋ, ಎಲ್ಲರೂ ಅದೇ ರೀತಿ ಮಾಡುತ್ತಾರೆ ಎಂದು ತಿಳಿದುಕೊಂಡಿದ್ದಾರೆ. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ. ಜನ ಈಗಾಗಲೇ ಅವರಿಗೆ ಉತ್ತರ ನೀಡಿದ್ದಾರೆ ಎಂದು ತಿರುಗೇಟು ನೀಡಿದರು.

Minister BC Patil Reaction on Shivraj Thangadagi Statement
ಕೃಷಿ ಸಚಿವ ಬಿ.ಸಿ ಪಾಟೀಲ್
author img

By

Published : Jul 20, 2020, 2:31 PM IST

ಕೊಪ್ಪಳ : ಶಿವರಾಜ ತಂಗಡಗಿ ಅವರಂತಹ ಸತ್ಯ ಹರಿಶ್ಚಂದ್ರ, ಪ್ರಮಾಣಿಕರು ಜಗತ್ತಲ್ಲಿ ಯಾರೂ ಇಲ್ಲ. ಹೀಗಾಗಿಯೇ ಜನರು ಅವರನ್ನು ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಟಾಂಗ್ ನೀಡಿದ್ದಾರೆ.

ಉಸ್ತುವಾರಿ ಸಚಿವರು ಬಂದು ಒಂದು ದಿನ ವಸೂಲಿ ಮಾಡ್ತಾರೆ, ಇನ್ನೊಂದು ದಿನ ಮೀಟಿಂಗ್ ಮಾಡಿ ಹೋಗ್ತಾರೆ ಎಂಬ ಶಿವರಾಜ ತಂಗಡಗಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಬಿ.ಸಿ ಪಾಟೀಲ್, ಮಾಜಿ ಸಚಿವ ತಂಗಡಗಿ ಈ ಹಿಂದೆ ಉಸ್ತುವಾರಿ ಸಚಿವರಿದ್ದಾಗ ಏನ್ ಮಾಡಿದ್ದಾರೋ, ಎಲ್ಲರೂ ಅದೇ ರೀತಿ ಮಾಡುತ್ತಾರೆ ಎಂದು ತಿಳಿದುಕೊಂಡಿದ್ದಾರೆ. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ. ಜನ ಈಗಾಗಲೇ ಅವರಿಗೆ ಉತ್ತರ ನೀಡಿದ್ದಾರೆ ಎಂದು ಹೇಳಿದರು.

ಕೃಷಿ ಸಚಿವ ಬಿ.ಸಿ ಪಾಟೀಲ್

ಕೊರೊನಾ ಪರಿಸ್ಥಿತಿಯ ಕುರಿತು ಮಾತನಾಡಿ, ನಾನು ಕೂಡಾ ಕೊರೊನಾ ತಪಾಸಣೆಗೆ ಒಳಗಾಗಿದ್ದೆ. ಸಂಬಂಧಿಕರೊಬ್ಬರಿಗೆ ಪಾಸಿಟಿವ್ ಬಂದಿತ್ತು. ಹೀಗಾಗಿ ಹೋಂ ಕ್ವಾರಂಟೈನ್ ಆಗಿದ್ದೆ. ಕೊರೊನಾ ಯಾರಿಗೆ ಬೇಕಾದರೂ ಬರಬಹುದು. ಜನರು ಜಾಗೃತಿಯಿಂದ ಇರಬೇಕು. ಸಾಮಾಜಿಕ ಜವಾಬ್ದಾರಿ ಮೂಲಕ ಸರ್ಕಾರದೊಂದಿಗೆ ಸಹಕರಿಸಬೇಕು. ಕೊರೊನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ಎಲ್ಲೂ ಎಡವಿಲ್ಲ. ಈ ಹಿಂದೆ ಮುಂಬೈನಿಂದ ಬಂದವರಿಗೆ ಪಾಸಿಟಿವ್ ಬರುತ್ತಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಎಲ್ಲರಿಗೂ ಬರುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಇಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸುತ್ತೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಯೂರಿಯಾ ಸಮಸ್ಯೆ ಇಲ್ಲ, ಒಂದು ವೇಳೆ, ಸಮಸ್ಯೆಯಾಗಿದ್ದರೆ ಅದನ್ನು ತಿಳಿದುಕೊಂಡು ಸರಿಪಡಿಸಲಾಗುತ್ತದೆ. ಜನರು ಯೂರಿಯಾವನ್ನು ಜಾಸ್ತಿ ಬಳಸಬಾರದು. ಇದರಿಂದ ಭೂಮಿ ಹಾಳಾಗುತ್ತದೆ. ಈ ಬಗ್ಗೆ ಪ್ರಧಾನಿಗಳು ಜನರಿಗೆ ಮನವರಿಕೆ ಮಾಡುತ್ತಿದ್ದಾರೆ. ಅಗತ್ಯ ಇದ್ದಷ್ಟು ಮಾತ್ರ ಯೂರಿಯಾ ಬಳಸಬೇಕು ಎಂದು ಇದೇ ವೇಳೆ ರೈತರಿಗೆ ಮನವಿ ಮಾಡಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.