ETV Bharat / state

ಬಿತ್ತನೆ ಬೀಜ ಅಕ್ರಮ ದಾಸ್ತಾನು ಪತ್ತೆ: ಕೃಷಿ ಅಧಿಕಾರಿಗಳ ಕಾರ್ಯಕ್ಕೆ ಬಿ.ಸಿ.ಪಾಟೀಲ್ ಶ್ಲಾಘನೆ - ಗಂಗಾವತಿ

ಅಕ್ರಮ ದಾಸ್ತಾನು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಟ್ವಿಟರ್ ಮೂಲಕ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.

Gangavathi
ಅಕ್ರಮ ದಾಸ್ತಾನು ಪತ್ತೆ
author img

By

Published : Jun 3, 2021, 1:32 PM IST

ಗಂಗಾವತಿ: ನಗರದ ಮಲ್ಲಿಕಾರ್ಜುನ ಸೀಡ್ಸ್ ಸೆಂಟರ್​​ಗೆ ಸೇರಿದ ಖಾಸಗಿ ಗೋದಾಮಿನ ಮೇಲೆ ದಾಳಿ ಮಾಡಿದ ಕೃಷಿ ಅಧಿಕಾರಿಗಳು, 14 ಲಕ್ಷ ರೂ. ಮೌಲ್ಯದ ಅಕ್ರಮ ದಾಸ್ತಾನು ಪತ್ತೆ ಹಚ್ಚಿರುವುದು ಇದೀಗ ಕೃಷಿ ಸಚಿವರ ಶ್ಲಾಘನೆಗೆ ಕಾರಣವಾಗಿದೆ.

  • ನಕಲಿ ಬಿತ್ತನೆ ಬೀಜ, ರಸಗೊಬ್ಬರ ಅಕ್ರಮ ದಾಸ್ತಾನು ಮತ್ತು ಮಾರಾಟದ ಹಾವಳಿ ಹಿನ್ನೆಲೆಯಲ್ಲಿ ನನ್ನ ಸೂಚನೆಯ ಮೇರೆಗೆ ಕೃಷಿ ವಿಚಕ್ಷಣಾ ದಳದ ಕಾರ್ಯಾಚರಣೆ ಮುಂದುವರಿದಿದ್ದು;

    ಕೊಪ್ಪಳ ಜಿಲ್ಲೆಯ ಕೃಷಿ ಅಧಿಕಾರಿ(ಎಡಿಎ) ನಿಂಗಪ್ಪ ಅವರ ನೇತೃತ್ವದಲ್ಲಿ ಇಂದು ಗಂಗಾವತಿ ನಗರದ ಮಲ್ಲಿಕಾರ್ಜುನ ಸೀಡ್ ಸೆಂಟರ್ ಮೇಲೆ ದಾಳಿ ನಡೆಸಿದ್ದು,
    1/ pic.twitter.com/k5VHy1vucq

    — Kourava B.C.Patil (@bcpatilkourava) June 2, 2021 " class="align-text-top noRightClick twitterSection" data=" ">

ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್, ಟ್ವಿಟರ್ ಮೂಲಕ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ. ನನ್ನ ಸೂಚನೆ ಮೇರೆಗೆ ಅಕ್ರಮ ದಾಸ್ತಾನು ಹಾಗೂ ನಕಲಿ ಬೀಜಗಳ ಅಂಗಡಿ ಮೇಲೆ ಅಧಿಕಾರಿಗಳ ದಾಳಿ ಮುಂದುವರೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕೃಷಿ ಇಲಾಖೆಯ ವಿಚಕ್ಷಣ ದಳದ ಅಧಿಕಾರಿಗಳು, 14 ಲಕ್ಷ ಮೌಲ್ಯದ ಅಕ್ರಮ ದಾಸ್ತಾನು ಪತ್ತೆ ಹಚ್ಚಿದ್ದಾರೆ. ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದು ಬಿಸಿ ಪಾಟೀಲ್ ತಮ್ಮ ಟ್ವೀಟ್​​​ನಲ್ಲಿ ಶ್ಲಾಘಿಸಿದ್ದಾರೆ.

ಜೋಳ, ಮುಸುಕಿನ ಜೋಳ ಹಾಗೂ ಸಜ್ಜೆಯ ಒಟ್ಟು 54 ಕ್ವಿಂಟಾಲ್ ಬಿತ್ತನೆ ಬೀಜವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇಲಾಖೆಯ ವಿಚಕ್ಷಣ ದಳದ ಕುಮಾರಸ್ವಾಮಿ, ನಿಂಗಪ್ಪ ಹಾಗೂ ಸಹಾಯಕ ಕೃಷಿ ಅಧಿಕಾರಿ ಸಂತೋಷ್ ಪಟ್ಟದಕಲ್ ಹಾಗೂ ಸಿಬ್ಬಂದಿ ದಾಳಿಯಲ್ಲಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.