ಕೊಪ್ಪಳ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ಯಾವ ಪಕ್ಷದಲ್ಲಿಯೂ ನೆಲೆಯಿಲ್ಲ. ಹಾಗಾಗಿ ಅವರೊಬ್ಬ ಪರದೇಶಿ ಗಿರಾಕಿಯಾಗಿದ್ದಾರೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬೇರೆ ಪಾರ್ಟಿ ಗಿರಾಕಿಯಾಗಿದ್ದಾರೆ.
ಅವರೇನು ಕಾಂಗ್ರೆಸ್ ಪಾರ್ಟಿ ಗಿರಾಕಿಯೇ?. ಬೇರೆ ಪಕ್ಷದಿಂದ ಕಾಂಗ್ರೆಸ್ಗೆ ವಲಸೆ ಬಂದಿದ್ದಾರೆ. ಅವರಿಗೆ ನನ್ನ ವಿರುದ್ಧ ಮಾತನಾಡಲು ಯಾವ ನೈತಿಕತೆ ಇದೆ ಎಂದು ಕಿಡಿಕಾರಿದರು.
ಡಿಕೆಶಿ ಈ ಹಿಂದೆ ಪಾರ್ಟಿ ಬಿಟ್ಟು ಹೋದವರನ್ನ ಮರಳಿ ಕರೆದುಕೊಳ್ಳುವುದಿಲ್ಲ ಎಂದಿದ್ದರು. ಆದ್ರೀಗ ಎಲ್ಲರನ್ನೂ ಮರಳಿ ಕರೆಯುತ್ತಿದ್ದಾರೆ. ಅಂದರೇ ಅವರ ಪಕ್ಷ ಮುಳುಗುವ ಹಡಗಾಗಿದೆ ಎಂದರ್ಥಲ್ಲವೇ?. ಇದೆಲ್ಲದ್ದಕ್ಕೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರೇ ಉತ್ತರ ನೀಡುತ್ತಾರೆ.
ಇದನ್ನೂಓದಿ: ಚುನಾವಣೆಗೆ ನಿಲ್ಲಲು ಬಹಳ ಕಡೆ ಆಹ್ವಾನವಿದೆ, ಇನ್ನೂ ತೀರ್ಮಾನ ಮಾಡಿಲ್ಲ: ಸಿದ್ದರಾಮಯ್ಯ
ಡಿಕೆಶಿ ಮತ್ತು ಸಿದ್ದು ಎಂಬ ಬೈಟು ಗಿರಾಕಿಗಳಿಗೆ ರಾಜ್ಯದ ಖುರ್ಚಿ ಖಾಲಿಯಿಲ್ಲ ಎಂಬುದನ್ನು ಮನದಟ್ಟು ಮಾಡಲಿದ್ದಾರೆ. ಈ ಬಾರಿ ಬಿಜೆಪಿಗೆ 150 ಸ್ಥಾನ ಕೊಡುವ ಮತದಾರರು ಮತ್ತೆ ಬಸವರಾಜ ಬೊಮ್ಮಾಯಿ ಅವರನ್ನೇ ಸಿಎಂ ಆಗುವಂತೆ ನೋಡಿಕೊಳ್ಳುತ್ತಾರೆ ಎಂದರು.