ETV Bharat / state

ಹೆಚ್ಐವಿ ಸೋಂಕಿತರಿಗೆ ವಿವಾಹ: ರಾಜ್ಯದಲ್ಲಿ ವಿನೂತನ ಹೆಜ್ಜೆಯಿಟ್ಟ ಕೊಪ್ಪಳ ಡಿಸಿ

ಜಿಲ್ಲೆಯಲ್ಲಿ ಒಟ್ಟು ಐದು ಸಾವಿರ ಹೆಚ್​ಐವಿ ಸೋಂಕಿತರಿದ್ದಾರೆ. ಇವರಲ್ಲಿ ಯಾರಾದರೂ ಅಪೇಕ್ಷೆ ಪಟ್ಟರೆ ವಧು - ವರರ ಸೂಕ್ತ ಅನ್ವೇಷಣೆ ಮಾಡಲಾಗುವುದು. ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.

Marriage for HIV Infected people
ಹೆಚ್ಐವಿ ಸೋಂಕಿತರಿಗೆ ವಿವಾಹ ಮಾಡಿಸಲು ಮುಂದಾದ ಕೊಪ್ಪಳ ಜಿಲ್ಲಾಡಳಿತ
author img

By

Published : Dec 1, 2021, 6:47 PM IST

Updated : Dec 1, 2021, 7:43 PM IST

ಗಂಗಾವತಿ: ಹೆಚ್ಐವಿ ಸೋಂಕಿತರು ಎಂದರೆ ಸಾಕು ಅವರನ್ನು ಯಾರೊಬ್ಬರು ಮದುವೆಯಾಗಲು ಮುಂದೆ ಬರಲ್ಲ. ಆದರೆ ಈ ಸೋಂಕಿತರಿಗೆ ಮದುವೆ ಮಾಡಿಸಿ ಸಂಸಾರದ ಸಂತೋಷ ಸಿಗುವಂತೆ ಮಾಡಲು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ವಿನೂತನ ಪ್ರಯೋಗವೊಂದಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಹೆಜ್ಜೆ ಇಟ್ಟಿದ್ದಾರೆ.

ಹೆಚ್ಐವಿ ಸೋಂಕಿತರಿಗೆ ವಿವಾಹ - ಡಿಸಿ ಹೇಳಿಕೆ

ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿರುವ ಕೊಪ್ಪಳದ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್, ಜಿಲ್ಲೆಯಲ್ಲಿ ಒಟ್ಟು ಐದು ಸಾವಿರ ಹೆಚ್​ಐವಿ ಸೋಂಕಿತರು ಇದ್ದಾರೆ. ಇವರಲ್ಲಿ ಯಾರಾದರೂ ಅಪೇಕ್ಷೆ ಪಟ್ಟರೆ ವಧು - ವರರ ಸೂಕ್ತ ಅನ್ವೇಷಣೆ ಮಾಡಲಾಗುವುದು. ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು. ವಧು - ವರರು ಅಪೇಕ್ಷೆ ಪಟ್ಟರೆ ಮಾತ್ರ ಮಾಹಿತಿ ಬಹಿರಂಗ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಹೆಚ್ಐವಿ ಸೋಂಕಿತರಿಗೆ ಪೂರಕವಾಗುವಂತೆ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯಿಂದ ವಿನೂತನ ಯೋಜನೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದನ್ನೂ ಓದಿ: ಬಿಜೆಪಿ ವಿರುದ್ಧ ಮಾತನಾಡುವ ಯೋಗ್ಯತೆ ಕಾಂಗ್ರೆಸ್​​​ಗಿಲ್ಲ: ಬಿ.ವೈ ವಿಜಯೇಂದ್ರ ಕಿಡಿ

Last Updated : Dec 1, 2021, 7:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.