ETV Bharat / state

ಬಿಸಿಲಿನ ಬೇಗೆಗೆ ಹೂ ಕಚ್ಚದ ಮಾವು... ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತ - undefined

ಬಿಸಿಲಿನ ಹೊಡೆತಕ್ಕೆ ಈ ಬಾರಿ ಮಾವು ಹಾನಿಗೊಳಗಾಗುತ್ತಿದೆ. ಇದರಿಂದಾಗಿ ಮಾವು ಬೆಳೆದ ರೈತರ ಮುಖ ಬಾಡಿ ಹೋಗುತ್ತಿದೆ. ಜಿಲ್ಲೆಯಲ್ಲಿ ವಿಪರೀತ ಬಿಸಿಲಿನ ಪರಿಣಾಮದಿಂದಾಗಿ ಈ ಬಾರಿಯೂ ಮಾವಿನ ಫಸಲು ಕೈಕೊಡುತ್ತಿದೆ. ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಮಾವು ಬೆಳೆದ ರೈತರಿಗೆ ಸಂಕಷ್ಟ ಎದುರಾಗುತ್ತಿದೆ.

ಮಾವು
author img

By

Published : May 3, 2019, 9:26 AM IST

ಕೊಪ್ಪಳ: ಮಳೆಗಾಲ ಆರಂಭವಾದರೂ ಜಿಲ್ಲೆಯಲ್ಲಿ ಬಿಸಿಲಿನ ತಾಪ ಇನ್ನೂ ತಗ್ಗುತ್ತಿಲ್ಲ. ಬಿಸಿಲಿನ ಬೇಗೆಗೆ ಜನ, ಜಾನುವಾರುಗಳಲ್ಲದೆ ತೋಟಗಾರಿಕೆ ಬೆಳೆಗಳು ಬಾಡಿ ಹೋಗುತ್ತಿವೆ. ಬಿಸಿಲಿನ ಹೊಡೆತಕ್ಕೆ ಈ ಬಾರಿ ಮಾವು ಹಾನಿಗೊಳಗಾಗುತ್ತಿದೆ. ಇದರಿಂದಾಗಿ ಮಾವು ಬೆಳೆದ ರೈತರ ಮುಖ ಬಾಡಿ ಹೋಗುತ್ತಿದೆ.

ಹೌದು, ಜಿಲ್ಲೆಯಲ್ಲಿ ವಿಪರೀತ ಬಿಸಿಲಿನ ಪರಿಣಾಮದಿಂದಾಗಿ ಈ ಬಾರಿಯೂ ಮಾವಿನ ಫಸಲು ಕೈಕೊಡುತ್ತಿದೆ. ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಮಾವು ಬೆಳೆದ ರೈತರಿಗೆ ಸಂಕಷ್ಟ ಎದುರಾಗುತ್ತಿದೆ. ಬಿಸಿಲಿನ ಪರಿಣಾಮದಿಂದಾಗಿ ಸರಿಯಾಗಿ ಹೂ ಕಟ್ಟಿಲ್ಲ. ಕಟ್ಟಿದ ಹೂವು ಹೀಚುಕಾಯಿಯಾಗಿ, ಬಲಿತು ಕೈಗೆ ಬರುತ್ತಿದೆ ಎನ್ನುವಾಗಲೇ ಉದುರಿ ಬೀಳುತ್ತಿದೆ. ಮಾವಿನ ಮೇಲೆ ಹಳದಿ ಹಾಗೂ ಕಪ್ಪು ಕಲೆಯಂತಾಗಿ ಉದುರಿ ಬೀಳುತ್ತಿದೆ. ಇದರಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತಿದೆ.

ಬೆಳೆಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತ

ಜಿಲ್ಲೆಯಲ್ಲಿ ಸುಮಾರು 3 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಮಾವು ಬೆಳೆ ಇದೆ. ಗಂಗಾವತಿ ತಾಲೂಕು ಒಂದರಲ್ಲಿಯೇ ಸುಮಾರು 1 ಸಾವಿರಕ್ಕೂ ಹೆಚ್ಚು ಹೆಕ್ಟೆರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಒಳ್ಳೆಯ ಫಸಲು ಬರುತ್ತದೆ ಎಂದು ಮಾವು ಬೆಳೆಗಾರರು ಮಾವಿನ ತೋಟವನ್ನು ಕಾಳಜಿಯಿಂದ ನಿರ್ವಹಣೆ ಮಾಡಿದ್ದರು. ಆದರೆ, ಈ ಉರಿಬಿಸಿಲಿನಿಂದ ಮಾವಿನ ಕಾಯಿಗಳು ಉದುರಿ ಬೀಳುತ್ತಿರೋದು ರೈತರಿಗೆ ನಷ್ಟವಾಗಿ ಪರಿಣಮಿಸಿದೆ.

ಪ್ರಾರಂಭದಲ್ಲಿ ಮಾವು ಸಾಕಷ್ಟು ಹೂ ಬಿಟ್ಟಿತ್ತು. ಒಳ್ಳೆಯ ಇಳುವರಿ ಬರುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಮಿತಿಮೀರಿದ ತಾಪಮಾನ ಹಾಗೂ ಹವಾಮಾನ ವೈಪರಿತ್ಯದಿಂದಾಗಿ ಮಾವು ಈ ಬಾರಿ ಕೈ ಹಿಡಿಯಲಿಲ್ಲ. ಇರುವ ಕಾಯಿಗಳು ಉದುರಿ ಹೋಗುತ್ತಿದ್ದು, ನಷ್ಟ ಅನುಭವಿಸುವಂತಾಗಿದೆ ಎಂದು ಹೇಳುತ್ತಾರೆ ರೈತರು.

Intro:Body:ಕೊಪ್ಪಳ:-ಮಳೆಗಾಲ ಆರಂಭವಾದರೂ ಜಿಲ್ಲೆಯಲ್ಲಿ ಬಿಸಿಲಿನ ತಾಪ ಇನ್ನೂ ತಗ್ಗುತ್ತಿಲ್ಲ. ಭಾಸ್ಕರನ ತಾಪಕ್ಕೆ ಜನಜಾನುವರುಗಳಲ್ಲದೆ ತೋಟಗಾರಿಕೆ ಬೆಳೆಗಳು ಬಾಡಿ ಹೋಗುತ್ತಿವೆ. ಬಿಸಿಲಿನ ಹೊಡೆತಕ್ಕೆ ಈ ಬಾರಿ ಮಾವು ಹಾನಿಗೊಳಗಾಗುತ್ತಿದೆ. ಇದರಿಂದಾಗಿ ಮಾವು ಬೆಳೆದ ರೈತರ ಮುಖ ಬಾಡಿ ಹೋಗುತ್ತಿದೆ.
ಹೌದು,,,
ಜಿಲ್ಲೆಯಲ್ಲಿ ವಿಪರೀತ ಬಿಸಿಲಿನ ಪರಿಣಾಮದಿಂದಾಗಿ ಈ ಬಾರಿಯೂ ಮಾವಿನ ಫಸಲು ಕೈಕೊಡುತ್ತಿದೆ. ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಮಾವು ಬೆಳೆದ ರೈತರಿಗೆ ಸಂಕಷ್ಟ ಎದುರಾಗುತ್ತಿದೆ. ಬಿಸಿಲಿನ ಪರಿಣಾಮದಿಂದಾಗಿ ಸರಿಯಾಗಿ ಹೂ ಕಟ್ಟಿಲ್ಲ. ಕಟ್ಟಿದ ಹೂವು ಹೀಚುಕಾಯಿಯಾಗಿ, ಬಲಿತು ಕೈಗೆ ಬರುತ್ತಿದೆ ಎನ್ನುವಾಗಲೇ ಉದುರಿ ಬೀಳುತ್ತಿದೆ. ಮಾವಿನ ಮೇಲೆ ಹಳದಿ ಹಾಗೂ ಕಪ್ಪು ಕಲೆಯಂತಾಗಿ ಉದುರಿ ಬೀಳುತ್ತಿದೆ. ಇದರಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತಿದೆ.
ಜಿಲ್ಲೆಯಲ್ಲಿ ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದೆ. ಗಂಗಾವತಿ ತಾಲೂಕೊಂದರಲ್ಲಿಯೇ ಸುಮಾರು 1 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಒಳ್ಳೆಯ ಫಸಲು ಬರುತ್ತದೆ ಎಂದು ಮಾವು ಬೆಳೆಗಾರರು ಮಾವಿನ ತೋಟವನ್ನು ಕಾಳಜಿಯಿಂದ ನಿರ್ವಹಣೆ ಮಾಡಿದ್ದರು. ಆದರೆ, ಈ ಉರಿಬಿಸಿಲಿನಿಂದ ಮಾವಿನ ಕಾಯಿಗಳು ಉದುರಿ ಬೀಳುತ್ತಿರೋದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪ್ರಾರಂಭದಲ್ಲಿ ಮಾವು ಸಾಕಷ್ಟು ಹೂ ಬಿಟ್ಟಿತ್ತು. ಒಳ್ಳೆಯ ಇಳುವರಿ ಬರುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಮಿತಿಮೀರಿದ ತಾಪಮಾನ ಹಾಗೂ ಹವಾಮಾನ ವೈಪರಿತ್ಯದಿಂದಾಗಿ ಮಾವು ಈ ಬಾರಿ ಕೈ ಹಿಡಿಯಲಿಲ್ಲ. ಇರುವ ಕಾಯಿಗಳು ಉದುರಿ ಹೋಗುತ್ತಿದ್ದು ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ಮಾವು ಬೆಳೆಗಾರ ಗಂಗಾವತಿ ತಾಲೂಕಿನ ಬಸಾಪಟ್ಟಣದ ಅನೀಲಕುಮಾರ್ ಅವರು.

ಬೈಟ್1:- ಅನೀಲಕುಮಾರ, ಬಸಾಪಟ್ಟಣದ ಮಾವು ಬೆಳೆಗಾರ

ಇನ್ನು ಕಳೆದ ಬಾರಿಗಿಂತ ಈ ಬಾರಿ ಈ ಭಾಗದಲ್ಲಿ ವಿಪರೀತ ತಾಪಮಾನವಿದೆ. ಹೀಗಾಗಿ, ಮಾವು ಬೆಳೆ ಅಷ್ಟೊಂದು ಚೆನ್ನಾಗಿಲ್ಲ. ರೈತರು ಸಾವಯವ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಇದರಿಂದಾಗಿ ಮಾವಿನ ಮರಗಳಿಗೆ ತೇವಾಂಶದ ಜೊತೆಗೆ ಮಾವು ಫಸಲಿಗೆ ಅನುಕೂಲವಾಗಲಿದೆ. ವಿಪರೀತ ಬಿಸಿಲು, ಹವಾಮಾನದ ವೈಪರಿತ್ಯ ಹಾಗೂ ನೀರಿನ ಅಭಾವದಿಂದ ಮಾವಿನ ಫಸಲು ಕುಂಠಿತಕ್ಕೆ ಕಾರಣ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ತಾಂತ್ರಿಕ ಸಹಾಯಕ ಅಧಿಕಾರಿ ಪರಶುರಾಮ ಅವರು.

ಬೈಟ್2:- ಪರಶುರಾಮ, ತೋಟಗಾರಿಕೆ ಇಲಾಖೆಯ ತಾಂತ್ರಿಕ ಸಹಾಯಕ

ಒಟ್ಟಾರೆಯಾಗಿ ಉತ್ತಮ ಬೆಲೆ ಇರುವಾಗ ಮಾವು ಇಳುವರಿ ಕುಂಠಿತಗೊಂಡಿರುವುದರ ಜೊತೆಗೆ ಕೈಗೆ ಬಂದ ಬೆಳೆ ಬಿಸಿಲಿಗೆ ತುತ್ತಾಗಿ ಹಾಳಾಗುತ್ತಿರೋದು ರೈತರ ದುರಾದೃಷ್ಠ.
Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.