ETV Bharat / state

ಬೈಕ್​​ ವಿಚಾರಕ್ಕೆ ಗಲಾಟೆ: ಕನಕಗಿರಿಯಲ್ಲಿ ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ - ಸ್ನೇಹಿತನ ಕೊಲೆ

ಬೈಕ್​​ ವಿಚಾರಕ್ಕೆ ಗಲಾಟೆಯಾಗಿ ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿ ನಡೆದಿದೆ.

Man guilty of stabbing friend to death
ರವೀಂದ್ರಕುಮಾರ ಮಹಾಂತಪ್ಪ ದೋಟಿಹಾಳ- ಕೊಲೆಯಾದ ವ್ಯಕ್ತಿ
author img

By

Published : Sep 24, 2022, 7:13 AM IST

ಗಂಗಾವತಿ(ಕೊಪ್ಪಳ): ಸ್ನೇಹಿತನ ಬೈಕ್ ತೆಗೆದುಕೊಂಡು ಹೋಗಿ ತಡವಾಗಿ ತಂದು ಕೊಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ಕುಪಿತನಾದ ವ್ಯಕ್ತಿ ತಮ್ಮ ಸ್ನೇಹಿತನಾದ ಬೈಕ್ ಮಾಲೀಕನ ಮೇಲೆ ಚಾಕುವಿನಿಂದ ಇರಿದು ಕೊಲೆ ಘಟನೆ ಕನಕಗಿರಿಯಲ್ಲಿ ನಡೆದಿದೆ. ಪಟ್ಟಣದ ಸಪ್ಲಯರ್ಸ್ (ಶಾಮಿಯಾನ) ಅಂಗಡಿ ಮಾಲೀಕ ರವೀಂದ್ರ ಕುಮಾರ ಮಹಾಂತಪ್ಪ ದೋಟಿಹಾಳ (31) ಕೊಲೆಯಾದ ವ್ಯಕ್ತಿ. ಮುತ್ತು ಈರಪ್ಪ ಹಡಪದ ಕೊಲೆಗೈದ ಆರೋಪಿ.

ಪ್ರಕರಣದ ವಿವರ: ಮುತ್ತು ಮತ್ತು ರವೀಂದ್ರ ಇಬ್ಬರು ಗೆಳೆಯರು. ಆಕಸ್ಮಿಕ ಕೆಲಸದ ಅಂಗವಾಗಿ ಮುತ್ತು ಅರ್ಧ ಗಂಟೆಯಲ್ಲಿ ವಾಪಸ್ ಬರುವುದಾಗಿ ರವೀಂದ್ರ ಅವರ ಬೈಕ್ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ತುಂಬಾ ತಡವಾಗಿ ಬೈಕ್​ನ್ನು ತಂದು ಕೊಟ್ಟಿದ್ದಾರೆ. ಈ ಬಗ್ಗೆ ರವೀಂದ್ರ ಪ್ರಶ್ನಿಸಿದ್ದಕ್ಕೆ ಮುತ್ತು ಕುಪಿತರಾಗಿ ರವೀಂದ್ರ ಮೇಲೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ. ಇದರಿಂದ ತೀವ್ರ ಗಾಯಗೊಂಡ ರವೀಂದ್ರ ಅವರಿಗೆ ಕನಕಗಿರಿಯ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.

complaint copy
ದೂರು ಪ್ರತಿ

ಬಳಿಕ ಗಂಗಾವತಿಯ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್​​ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ರವೀಂದ್ರ ಮೃತಪಟ್ಟಿದ್ದಾಗಿ ಮೃತನ ಸಹೋದರ ಮಂಜುನಾಥ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಆಕೆ ವಯಸ್ಸು 26.. ಮದುವೆ 6... 7ನೇ ಮದುವೆಯಲ್ಲಿ ರೆಡ್​​ ಹ್ಯಾಂಡ್​ ಆಗಿ ಹಿಡಿದ ಗಂಡ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.