ETV Bharat / state

ಪ.ಬಂಗಾಳದ ವಿಶೇಷ ಚೇತನ ಯುವತಿಯನ್ನು ವರಿಸಿದ ಕೊಪ್ಪಳದ ಯುವಕ - ವಿಶೇಷ ಮದುವೆ

ಪಶ್ಚಿಮ ಬಂಗಾಳ ಮೂಲದ ವಿಶೇಷ ಚೇತನ ಯುವತಿಯನ್ನು ಕೊಪ್ಪಳದ ಯುವಕ ಸರಳವಾಗಿ ಮದುವೆಯಾಗಿದ್ದಾನೆ.

koppal
ಹಸೆಮಣೆ ಏರಿದ ಪೂಜಾ ಘೋಷ್ ಹಾಗೂ ಮಂಜುನಾಥ್ ಶ್ರೇಷ್ಠಿ
author img

By

Published : Jun 2, 2023, 8:55 AM IST

Updated : Jun 2, 2023, 12:10 PM IST

ಪ.ಬಂಗಾಳದ ವಿಶೇಷ ಚೇತನ ಯುವತಿಯನ್ನು ವರಿಸಿದ ಕೊಪ್ಪಳದ ಯುವಕ

ಕೊಪ್ಪಳ: ಋಣಾನುಬಂಧ ಎಂದರೆ ಇದೇ ನೋಡಿ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದಿರುವ ಹೆಣ್ಣು ಎಲ್ಲಿಯೋ ಸೇರುತ್ತಾಳೆ. ಪಶ್ಚಿಮ ಬಂಗಾಳ ಮೂಲದ ಯುವತಿ ಕೊಪ್ಪಳದ ವರನ ಕೈ ಹಿಡಿದ ವಿಶೇಷ ಮದುವೆಯೊಂದು ನಡೆದಿದೆ. ಪೂಜಾ ಘೋಷ್ ಎಂಬ ಯುವತಿ ಕೊಪ್ಪಳದ ಮಂಜುನಾಥ್ ಶ್ರೇಷ್ಠಿ ಎಂಬುವವರ ಜತೆ ಸಪ್ತಪದಿ ತುಳಿದಿದ್ದಾರೆ.

ಆಕೆ ಸುಂದರ ಯುವತಿ, ಆದರೆ ಕಣ್ಣು ಕಾಣಿಸದು. ಆತ ಕೂಡಾ ಸುಂದರ ಯುವಕ. ಯುವತಿ ಕನ್ನಡ ನೆಲದವಳಲ್ಲ. ಹೀಗಿದ್ದರೂ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿರಿಸಲು ಇದ್ಯಾವುದೂ ಅಡ್ಡಿಯಾಗಲಿಲ್ಲ. ಭಾಷೆ, ಸಂಸ್ಕೃತಿ ಬೇರೆಯಾಗಿದ್ದರೂ ಭಾವನೆ ಒಂದೇ ಆಗಿತ್ತು. ಕೊಪ್ಪಳದ ವಾಸವಿ ಕಲ್ಯಾಣ ಮಂಟಪದಲ್ಲಿ ಈ ವಿಶಿಷ್ಟ ಮದುವೆ ಜರುಗಿತು. ಸ್ನೇಹಿತರು, ಬಂಧುಗಳು ಹಾಗೂ ಹಿತೈಷಿಗಳು ಮದುವೆಗೆ ಸಾಕ್ಷಿಯಾದರು.

ಪೂಜಾ ಘೋಷ್ ಮೂಲತಃ ಪಶ್ಚಿಮ ಬಂಗಾಳದವರು. ಆಕೆಯ ತಂದೆ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಈಕೆಗೆ ತಾಯಿ ಹಾಗೂ ಸಹೋದರ ಇದ್ದು, ಸಹೋದರನಿಗೆ ಆರೋಗ್ಯ ಸಮಸ್ಯೆ ಇದೆ. ಈ ಮಧ್ಯೆ ಪೂಜಾ ಘೋಷ್ ಅವರಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಟ್ಯೂಮರ್ ಆಗಿ ದೃಷ್ಠಿ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆಕೆ ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸಿದ್ದು ಇಲ್ಲಿಯೇ ನೆಲೆಸಿದ್ದರು. ಹೀಗಿರುವಾಗ ಮದುವೆ ವಯಸ್ಸಿಗೆ ಬಂದಿದ್ದ ಪೂಜಾ ಅವರಿಗೆ ದೃಷ್ಟಿ ಇಲ್ಲದ ಕಾರಣಕ್ಕೆ ಮದುವೆ ಮಾಡಿಕೊಳ್ಳಲು ಯಾರು ಮುಂದೆ ಬರಲಿಲ್ಲ.

'ವಿಶೇಷ ಚೇತನರನ್ನೇ ಮದುವೆಯಾಗ್ತೀನಿ': ಯಾವುದೇ ಸಮಸ್ಯೆ ಇಲ್ಲದ ಕೊಪ್ಪಳದ ಮಂಜುನಾಥ ಶ್ರೇಷ್ಠಿ ಅವರು ವಿಶೇಷಚೇತನರನ್ನೇ ಮದುವೆಯಾಗುವುದಾಗಿ ತಮ್ಮ ಮಾಹಿತಿಯನ್ನು ಮ್ಯಾಟ್ರಿಮೊನಿಯಲ್ಲಿ ಹಾಕಿದ್ದರು. ಪೂಜಾ ಘೋಷ್​ ಕೂಡ ತಮ್ಮ ಸ್ವವಿವರವನ್ನು ಮ್ಯಾಟ್ರಿಮೊನಿಯಲ್ಲಿ ಹಾಕಿದ್ದರು. ಇವರಿಬ್ಬರ ಸಂಪರ್ಕಕ್ಕೆ ಮ್ಯಾಟ್ರಿಮೊನಿ ವೇದಿಕೆಯಾಗಿದೆ. ಇಬ್ಬರು ಮಾತುಕತೆ ನಡೆಸಿ ಮನೆಯವರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದಾರೆ.

ಪೂಜಾ ಅವರ ತಾಯಿಗೆ ಮಗಳು ಕೊಪ್ಪಳದಲ್ಲಿಯ ವರನ ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ ಮಗಳು ಒಪ್ಪಿಕೊಂಡವನನ್ನು ತಿರಸ್ಕರಿಸುವ ಧೈರ್ಯವೂ ಅವರಿಗೆ ಇರಲಿಲ್ಲ. ಈ ಕಾರಣಕ್ಕೆ ಬುಧುವಾರ ಕನ್ಯಾದಾನ ಮಾಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಮಂಜುನಾಥ ಅವರ ಮನದಿಂಗತಕ್ಕೆ ಸ್ನೇಹಿರತರು ಹಾಗೂ ಬಂಧುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲೇ ವಧು ವರಿಸಿದ ವರ: ಸಿನಿಮಾ ಶೈಲಿಯ ವಿವಾಹವೊಂದು ತೆಲಂಗಾಣದಲ್ಲಿ ಇತ್ತೀಚೆಗೆ ನಡೆದಿತ್ತು. ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ವಧುವನ್ನು ವರ ಆಸ್ಪತ್ರೆಯಲ್ಲೇ ವಿವಾಹವಾಗಿದ್ದ. ತೆಲಂಗಾಣದ ಮಂಚೇರಿಯಲ್​ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ಮಂಚೇರಿಯಲ್​ ಜಿಲ್ಲೆಯ ಚೆನ್ನೂರು ಮಂಡಲದ ಬಾನೋತ್​ ಶೈಲಜಾ ಎಂಬವರು ಜಯಶಂಕರ್ ಭೂಪಾಲಪಳ್ಳಿ ಜಿಲ್ಲೆಯ ಬಸ್ವರಾಜು ಪಲ್ಲೆ ಗ್ರಾಮದ ಹಟ್ಕರ್​ ತಿರುಪತಿ ಎಂಬವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಲಂಬಾಡಿಪಲ್ಲಿಯಲ್ಲಿ ಇವರಿಬ್ಬರ ವಿವಾಹ ನಿಶ್ಚಯಿಸಲಾಗಿತ್ತು. ಆದರೆ, ವಿವಾಹಬೇಕಿದ್ದ ವಧು ಬುಧವಾರ ಅಸ್ವಸ್ಥಗೊಂಡಿದ್ದರು. ಕೂಡಲೇ ಕುಟುಂಬಸ್ಥರು ಆಕೆಯನ್ನು ಮಂಚೇರಿಯಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕೆಲವು ವೈದ್ಯಕೀಯ ಕಾರಣಗಳಿಗಾಗಿ ಆಕೆಗೆ ಶಸ್ತ್ರಚಿಕಿತ್ಸೆಯನ್ನು ವೈದ್ಯರು ನಡೆಸಿದ್ದು, ಕೆಲವು ದಿನಗಳ ಕಾಲ ಬೆಡ್​ ರೆಸ್ಟ್​ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಈ ವಿಷಯ ತಿಳಿದ ವರ ತಿರುಪತಿ ಬಹಳ ನೊಂದುಕೊಂಡಿದ್ದರು. ಕೊನೆಗೆ ಕುಟುಂಬಸ್ಥರು ಒಪ್ಪಿ ಶೈಲಜಾ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ವೈದ್ಯರಿಗೆ ತಿರುಪತಿ ವಿಷಯ ತಿಳಿಸಿದ್ದರು. ವೈದ್ಯರು ವರನ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ವಿವಾಹಕ್ಕೆ ಸಮ್ಮತಿ ಸೂಚಿಸಿದ್ದರು.

ಇದನ್ನೂ ಓದಿ: ಸಿನಿಮಾ ಶೈಲಿಯಲ್ಲಿ ವಿವಾಹ; ಆಸ್ಪತ್ರೆಯಲ್ಲೇ ವಧು ವರಿಸಿದ ವರ

Last Updated : Jun 2, 2023, 12:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.