ಗಂಗಾವತಿ: ಬೈಕ್ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟು, ಮತ್ತೊಬ್ಬ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಚಿಕ್ಕಬೆಣಕಲ್ ಸಮೀಪ ಸಂಭವಿಸಿದೆ.
ಮೃತಪಟ್ಟ ವಿದ್ಯಾರ್ಥಿಯನ್ನು ಮುಕ್ಕುಂಪಿ ಗ್ರಾಮದ ನಿವಾಸಿ ಹಾಗೂ ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎ ಪ್ರಥಮ ವರ್ಷದ ಮಹೇಶ ಸುಗ್ಗೇನಹಳ್ಳಿ (20) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಮುಕ್ಕುಂಪಿಯ ಮತ್ತೊಬ್ಬ ನಿವಾಸಿ ಶರಣಪ್ಪ ತೀವ್ರವಾಗಿ ಗಾಯಗೊಂಡಿದ್ದು, ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಳಿಕ ಚಾಲಕ ನಾಪತ್ತೆಯಾಗಿದ್ದು, ಗಂಗಾವತಿಯ ಗ್ರಾಮೀಣ ಠಾಣೆಯಲ್ಲಿ ಲಾರಿ ಚಾಲಕನ ವಿರುದ್ಧ ದೂರು ದಾಖಲಾಗಿದೆ.