ಗಂಗಾವತಿ : ಲಾಕ್ಡೌನ್ ಪರಿಣಾಮದಿಂದ ತಾಲೂಕಿನ ಅಂಜನಾದ್ರಿ ದೇಗುಲದಲ್ಲಿನ ಕಾಣಿಕೆ ಹುಂಡಿಗೆ ಭಕ್ತರಿಂದ ಸಂಗ್ರಹವಾಗುತ್ತಿದ್ದ ಆದಾಯ ಕುಸಿತ ಕಂಡಿದ್ದು, ಕೇವಲ ಎರಡು ತಿಂಗಳಲ್ಲಿ ಸುಮಾರು 12 ಲಕ್ಷ ರೂಪಾಯಿ ಆದಾಯ ಕೈತಪ್ಪಿದೆ.
ಮಾರ್ಚ್ 23 ರಿಂದ ಮೇ.31ರವರೆಗೆ ದೇಗುಲ ಸಂಪೂರ್ಣ ಬಂದಾಗಿತ್ತು. ಹೀಗಾಗಿ ಮತ್ತೆ ದೇಗುಲಗಳ ಬಾಗಿಲು ಜೂನ್ 1ರಿಂದ ತೆರೆಯಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆ ಇದೀಗ ದೇವಸ್ಥಾನಗಳಲ್ಲಿ ಪೂಜಾ ಸಿದ್ಧತೆ ಆರಂಭವಾಗುತ್ತಿದೆ.
ಈ ಹಿನ್ನೆಲೆ ಶನಿವಾರ ದೇಗುಲದಲ್ಲಿನ ಕಾಣಿಕೆ ಹುಂಡಿ ತೆಗೆದು ಲೆಕ್ಕ ಮಾಡಿದಾಗ 3.08 ಲಕ್ಷ ಮೊತ್ತದ ಹಣ ಮಾತ್ರ ಸಂಗ್ರಹವಾಗಿದೆ. ಈ ಪೈಕಿ ಮೂರು ನೇಪಾಳ, ಒಂದು ಯುರೋ ಕರೆನ್ಸಿ ಪತ್ತೆಯಾಗಿದೆ.
ಕಳೆದ ಫೆ.29ರಂದು ದೇಗುಲದಲ್ಲಿನ ಹುಂಡಿಯನ್ನು ಕೊನೆಯ ಬಾರಿಗೆ ಎಣಿಕೆ ಮಾಡಲಾಗಿತ್ತು. ಆಗ 6.05 ಲಕ್ಷ ಹಣ ಸಂಗ್ರಹವಾಗಿತ್ತು. ಇನ್ನು ಮಾಸಿಕ ಸರಿ ಸುಮಾರು ಐದು ಲಕ್ಷ ರೂಪಾಯಿ ಆದಾಯ ಹೊಂದಿದ್ದ ಅಂಜನಾದ್ರಿ ಬೆಟ್ಟದ ದೇಗುಲದ ಆದಾಯ ಲಾಕ್ಡೌನ್ನಿಂದ ಕುಸಿತ ಕಂಡಿದೆ.