ETV Bharat / state

ಯುವಪೀಳಿಗೆ ಓದುವ ಅಭಿರುಚಿಯಿಂದ ವಿಮುಖರಾಗಬಾರದು; ಶಾಸಕ ಅಮರೇಗೌಡ ಪಾಟೀಲ - MLA Amaregowda patil news

ಯುವ ಪೀಳಿಗೆಯಲ್ಲಿ ಸಾಹಿತ್ಯದ ಅಭಿರುಚಿ ಕಡಿಮೆಯಾಗುತ್ತಿದೆ. ಸಾಹಿತ್ಯ ಕೇವಲ ವಯಸ್ಸಾದವರಿಗೆ ಮಾತ್ರ ಅಲ್ಲ. ಇದು ಎಲ್ಲರಿಗೂ ಇದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದ್ದಾರೆ.

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ
author img

By

Published : Mar 3, 2021, 8:46 PM IST

Updated : Mar 3, 2021, 9:50 PM IST

ಕುಷ್ಟಗಿ: ಸಾಹಿತ್ಯ ವಯಸ್ಸಾದವರಿಗೆ ಸೀಮಿತವಾಗಿಲ್ಲ. ಅದು ಸರ್ವರಿಗಾಗಿ ಇದ್ದು, ಯುವ ಪೀಳಿಗೆ ಇದನ್ನು ಅರ್ಥೈಸಿಕೊಳ್ಳದೇ ಸಾಹಿತ್ಯ ಹಾಗೂ ಓದುವ ಅಭಿರುಚಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕಳವಳ ವ್ಯಕ್ತಪಡಿಸಿದರು.

ಶಾಸಕ ಅಮರೇಗೌಡ ಪಾಟೀಲ

ಶ್ರೀ ಓಂಕಾರೇಶ್ವರ ದೇವಸ್ಥಾನದ ಆವರಣದಲ್ಲಿ ಕನ್ನಡ ಭವನದ ಲಿಂ. ಶ್ರೀ ಶಶಿಧರಸ್ವಾಮಿ ವೇದಿಕೆಯಲ್ಲಿ ನಡೆದ 12ನೇ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಓದಿ: ಕಾರಟಗಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, ಲಾಂಛನ ಬಿಡುಗಡೆ

ಯುವ ಪೀಳಿಗೆಯಲ್ಲಿ ಸಾಹಿತ್ಯದ ಅಭಿರುಚಿ ಕಡಿಮೆಯಾಗುತ್ತಿದ್ದು, ಬದಲಿಗೆ ಸಿನಿಮಾ, ಡ್ಯಾನ್ಸ್, ಸಂಗೀತ ರಸಮಂಜರಿ, ಹಾಸ್ಯ ಇತ್ಯಾದಿಗಳತ್ತ ಮುಖ ಮಾಡುತ್ತಿದ್ದಾರೆ. ಈ ರೀತಿ ಸಾಹಿತ್ಯದ ಮೂಲವನ್ನು ಯುವಕರು ಕಡೆಗಣಿಸುತ್ತಿರುವುದು ಹೆತ್ತ ತಾಯಿಯನ್ನು ಕಡೆಗಣಿಸಿದಂತಾಗಿದೆ ಎಂದರು.

Last Updated : Mar 3, 2021, 9:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.