ಗಂಗಾವತಿ: ಬೆಂಬಿಡದೇ ಕಾಡುತ್ತಿರುವ ಚಿರತೆ ಹಾವಳಿಯಿಂದ ನಲಗುತ್ತಿರುವ ತಾಲೂಕಿನ ಆನೆಗೊಂದಿ ದುರ್ಗಬೆಟ್ಟದಲ್ಲಿ ಗುರುವಾರ ಬೆಟ್ಟದ ಕಲ್ಲಿನ ಮೇಲೆ ಚಿರತೆ ಪ್ರತ್ಯಕ್ಷವಾಗುವ ಮೂಲಕ ಜನರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.
ಚಿರತೆ ಹಾವಳಿಯಿಂದ ಇಲ್ಲಿನ ನಿವಾಸಿಗಳು ನಲಗುತ್ತಿದ್ದು, ಜನರಲ್ಲಿ ಧೈರ್ಯ ತುಂಬುವ ಉದ್ದೇಶಕ್ಕೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್, ಮಂಗಳವಾರವಷ್ಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಹಾಗೆಯೇ ಕೂಡಲೇ ಹೆಚ್ಚುವರಿ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಅದರ ಬೆನ್ನಲ್ಲೆ ಗುರುವಾರ ಚಿರತೆ ಮತ್ತೆ ಪ್ರತ್ಯಕ್ಷವಾಗುವ ಮೂಲಕ ಆತಂಕ ಸೃಷ್ಟಿಸಿದೆ. ಬೆಟ್ಟದ ಬಂಡೆಯ ಮೇಲೆ ಸುಮಾರು ಐದಾರು ನಿಮಿಷ ವಿಶ್ರಾಂತಿ ಭಂಗಿಯಲ್ಲಿದ್ದ ಚಿರತೆಯ ದೃಶ್ಯವನ್ನು ಸ್ಥಳೀಯ ಯುವಕರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಭೀತಿಗೊಳಗಾದ ಕೋತಿಗಳು ಅರಚುವಿಕೆಯಿಂದಾಗಿ ಚಿರತೆ ಇರುವುದು ಯುವಕರ ಗಮನಕ್ಕೆ ಬಂದಿದೆ.