ಗಂಗಾವತಿ (ಕೊಪ್ಪಳ): ಕಾರಟಗಿ ಪಟ್ಟಣದಲ್ಲಿನ ಮಾಜಿ ಸಚಿವ ತಂಗಡಗಿ ಅವರಿಗೆ ಸೇರಿದ ವಸತಿ ಕಟ್ಟಡ ಬೇರೊಬ್ಬರ ಜಾಗದಲ್ಲಿ ನಿರ್ಮಾಣವಾಗಿದೆ ಎಂಬ ದೂರಿನ ಹಿನ್ನೆಲೆ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೆ ಕಾರ್ಯಕ್ಕೆ ಮುಂದಾಗಿದ್ದಾರೆ.
ಕಾರಟಗಿ ಪಟ್ಟಣದಲ್ಲಿರುವ ತಮ್ಮ ನಿವೇಶನಕ್ಕೆ ಸಂಬಂಧಿಸಿದ ವಿವಾದದಲ್ಲಿ ಸಿಲುಕಿದ್ದು, ಯಾವುದೇ ಸಂದರ್ಭದಲ್ಲಿ ತಮ್ಮ ಮೇಲೆ ಎಫ್ಐಆರ್ ಆಗಬಹುದು ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು.
ಕಳೆದ ಒಂದು ದಶಕದಿಂದ ಎದ್ದಿರುವ ತಮ್ಮ ಕಟ್ಟಡದ ವಿವಾದಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಇತ್ತೀಚಿಗೆ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ವಿವಾದದ ಮೂನ್ಸೂಚನೆ ಅರಿತಂತಿದ್ದ ಮಾಜಿ ಸಚಿವ ಯಾವುದೇ ಸಂದರ್ಭದಲ್ಲಿ ತಮ್ಮ ವಿರುದ್ಧ ದೂರು ದಾಖಲಾಗಬಹುದು ಎಂದು ಭವಿಷ್ಯ ನುಡಿದಿದ್ದರು.
ಒಂದೊಮ್ಮೆ ದೂರು ದಾಖಲಾದರೆ ಸ್ವತಃ ನಾನೇ ಪೊಲೀಸ್ ಠಾಣೆಗೆ ಹೋಗುತ್ತೇನೆ. ಪೊಲೀಸರು ಏನು ಮಾಡುತ್ತಾರೋ ನೋಡುತ್ತೇನೆ. ಬ್ರಿಟಿಷರನ್ನು ಓಡಿಸಿದ ಪಕ್ಷ ನಮ್ಮದು. ಈಗ ಅವರ ರೀತಿ ಕೆಲಸ ಮಾಡುತ್ತಿರುವವರನ್ನು ಓಡಿಸುವುದು ನಮಗೇನು ದೊಡ್ಡ ಕೆಲಸ ಅಲ್ಲ ಎನ್ನುವ ದಾಟಿಯಲ್ಲಿ ತಂಗಡಗಿ ಮಾತನಾಡಿದ್ದಾರೆ.