ಕುಷ್ಟಗಿ (ಕೊಪ್ಪಳ): ಭೂ ಒಡೆತನ ಯೋಜನೆಯಲ್ಲಿ ಬಡವರಿಗೆ ಹಂಚಲು ಹಿಂದಿನ ಕಾಂಗ್ರೆಸ್ ಸರ್ಕಾರ ಪ್ರತಿವರ್ಷ 500 ಎಕರೆ ಭೂಮಿ ಖರೀದಿಸಲು ವಿಫಲವಾಗಿತ್ತು ಎಂದು ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ ಛೇಡಿಸಿದರು.
ಸೋಮವಾರ ತಾಲೂಕಿನ ಕಡೇಕೊಪ್ಪ ಕ್ರಾಸ್ನಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃಧ್ಧಿ ಇಲಾಖೆಯ ಅಂದಾಜು 500 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಕೃಷ್ಣಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಈ ಅವಧಿಯಲ್ಲಿ 370 ಕೋಟಿ ರೂ. ಖರ್ಚು ಮಾಡಿ 4,014 ಎಕರೆ ಜಮೀನು ಖರೀದಿಸಿಕೊಟ್ಟಿದೆ. ಈ ವರ್ಷದ ಸಂಕಷ್ಟದ ಪರಿಸ್ಥಿತಿಯಲ್ಲೂ 11,140 ಕೊಳವೆಬಾವಿ ಕೊರೆಯಿಸಿಕೊಟ್ಟಿದೆ ಎಂದರು.
4 ತಿಂಗಳ ಲಾಕಡೌನ್ ಸಂದರ್ಭದಲ್ಲಿ 11,142 ಕೊಳವೆಬಾವಿ ಕೊರೆಯಿಸಿದ್ದು, ಇನ್ನೂ 10 ಸಾವಿರ ಕೊಳವೆಬಾವಿ ಕೊರೆಸಲು ಸಿದ್ದರಿದ್ದೇವೆ ಎಂದರು.
ಗಂಗಾ ಕಲ್ಯಾಣ ಯೋಜನೆಯಲ್ಲಿ ಬಡವರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಕುಟುಂಬಕ್ಕೆ ಉದ್ಯೋಗವಾಗುವ ಜೊತೆಗೆ ಭೂಮಿ ಬೆಲೆ ಹೆಚ್ಚಾಗುತ್ತಿದೆ. ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲೂ 10,347 ಕೊಳವೆಬಾವಿಗಳನ್ನು ವಿದ್ಯುತೀಕರಣಗೊಳಿಸಲಾಗಿದೆ ಎಂದರು.