ಗಂಗಾವತಿ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆ ಕಾಯ್ದೆ ಮತ್ತು ಎನ್ಆರ್ಸಿ, ಸಿಎಎ ಕಾಯ್ದೆಗಳ ವಿರುದ್ಧ ನಗರದಲ್ಲಿ ರ್ಯಾಲಿ ನಡೆಸಲು ಅವಕಾಶ ನೀಡುವಂತೆ ಆಗ್ರಹಿಸಿ ನೂರಾರು ಮಹಿಳೆಯರು ಏಕಾಏಕಿ ರಾತ್ರಿ ನಗರ ಠಾಣೆಗೆ ಮುತ್ತಿಗೆ ಹಾಕಿದರು.
ಈಗಾಗಲೇ ನಗರದಲ್ಲಿ ಸಮುದಾಯಯೊಂದರ ಮುಖಂಡರು ಈ ಕಾಯ್ದೆಯ ವಿರುದ್ಧವಾಗಿ ನಗರದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಈಗ ವಾರ್ಡ್ವಾರು ಜಾಗೃತಿ ಸಭೆ ಆಯೋಜಿಸುತ್ತಿದ್ದಾರೆ. ನಾವೂ ಕೂಡ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ ನಮಗೂ ಅವಕಾಶ ಮಾಡಿಕೊಡಿ ಎಂದು ಮಹಿಳೆಯರು ಮನವಿ ಮಾಡಿದ್ದಾರೆ.
ಜ.17ರಂದು ನಗರದಲ್ಲಿ ರ್ಯಾಲಿ ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿದರೂ ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಬಳಿಕ ಡಿವೈಎಸ್ಪಿ ಕಚೇರಿಗೆ ತೆರಳಿದ ಸಮುದಾಯ ಕೆಲ ಮುಖಂಡರು ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಜ.21ರಂದು ಮತ್ತೊಂದು ಸುತ್ತಿನ ಪ್ರತಿಭಟನೆ ಮಾಡಲು ತೀಮಾರ್ನ ಕೈಗೊಂಡಿದ್ದಾರೆ.