ETV Bharat / state

ಕೊಪ್ಪಳ, ಕಲಬುರಗಿಯಲ್ಲಿ ಕಾರ್ಮಿಕರ ಪ್ರತಿಭಟನೆ: ಒತ್ತಾಯಪೂರ್ವಕವಾಗಿ ಅಂಗಡಿಗಳನ್ನು ಬಂದ್ ಮಾಡಿಸಿ ದಾಂಧಲೆ - ಕಲಬುರಗಿ ಲೆಟೆಸ್ಟ್​ ನ್ಯೂಸ್​

ಇಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಘಟನೆಗಳು ಕರೆದಿದ್ದ ಭಾರತ ಬಂದ್​​ಗೆ ಕೊಪ್ಪಳದಲ್ಲಿ ಸಂಘಟನೆಗಳು ಬೆಂಬಲ ನೀಡಿವೆ, ಆದರೆ ಕಲಬುರಗಿಯಲ್ಲಿ ಕೆಲ ಕಿಡಿಗೇಡಿಗಳು ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಪ್ರತಿಭಟನೆ ನಡೆಸಿ ಘಟನೆ ನಡೆದಿದೆ.

ಕೊಪ್ಪಳದಲ್ಲಿ ಭಾರತ ಬಂದ್​ಗೆ ಬೆಂಬಲಿಸಿದ ಕಾರ್ಮಿಕ ಸಂಘಟನೆಗಳು
Bharath Band in Koppal
author img

By

Published : Jan 8, 2020, 8:19 PM IST

ಕಲಬುರಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಸಿಎಎ, ಎನ್ಆರ್​ಸಿ ವಿಷಯ ಸಹ ಪ್ರತಿಧ್ವನಿಸಿತು. ಜಾಥಾ ವೇಳೆ ಪ್ರತಿಭಟನಾಕಾರರು ಒತ್ತಾಯಪೂರ್ವಕವಾಗಿ ಅಂಗಡಿಗಳನ್ನು ಬಂದ್ ಮಾಡಿಸಿ ಗಲಾಟೆ ನಡೆಸಿದರು.

ಕೊಪ್ಪಳದಲ್ಲಿ ಭಾರತ ಬಂದ್​ಗೆ ಬೆಂಬಲಿಸಿದ ಕಾರ್ಮಿಕ ಸಂಘಟನೆಗಳು, ಕಲಬುರಗಿಯಲ್ಲಿ ಒತ್ತಾಯಪೂರ್ವಕವಾಗಿ ಅಂಗಟಿ ಮುಂಗಟ್ಟು ಮುಚ್ಚಿಸಿದ ಪ್ರತಿಭಟನಾಕಾರರು

ನಗರದ ಗಂಜ್ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ಕಾರ್ಮಿಕರು ಬೃಹತ್ ಪಾದಯಾತ್ರೆ ಪ್ರತಿಭಟನಾ ರ‍್ಯಾಲಿ ನಡೆಸಿದರು. ಈ ವೇಳೆ ಮಾರ್ಗಮಧ್ಯೆ ಕೆಲ ಕಿಡಗೇಡಿಗಳು ಸಿಟಿ ಸೆಂಟರ್ ಮಾಲ್, ಆಂಧ್ರಬ್ಯಾಂಕ್ ಕಾಂಪ್ಲೆಕ್ಸ್​ಗೆ ನುಗ್ಗಿ ವಾಟರ್ ಪೌಚ್ ಎಸೆದು ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು‌. ಈ ವೇಳೆ ಮಾಲೀಕರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಬೆಳಗ್ಗೆಯಿಂದ ನೀರಸವಾಗಿದ್ದ ಮಧ್ಯಾಹ್ನದ ವೇಳೆ ಮುಷ್ಕರ ಕ್ರಮೇಣ ತ್ರೀವ್ರಗೊಂಡಿತ್ತು. ಬೃಹತ್ ಪ್ರತಿಭಟನಾ ರ‍್ಯಾಲಿಯಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರು ಜನ ಭಾಗಿಯಾಗಿದ್ದರು. ರ‍್ಯಾಲಿಯುದ್ದಕ್ಕೂ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.

ಕೊಪ್ಪಳದಲ್ಲಿ ಭಾರತ ಬಂದ್​ಗೆ ಬೆಂಬಲಿಸಿದ ಕಾರ್ಮಿಕ ಸಂಘಟನೆಗಳು:

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದು ಕರೆದಿದ್ದ ದೇಶವ್ಯಾಪಿ ಮುಷ್ಕರ ಬೆಂಬಲಿಸಿ ನಗರದಲ್ಲಿ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.

ಅನೇಕ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಜಂಟಿಯಾಗಿ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ನಗರದ ಕೇಂದ್ರೀಯ ಬಸ್ ನಿಲ್ದಾಣದ ಎದುರು ಜಮಾಯಿಸಿದ್ದ ಪ್ರತಿಭಟನಾಕಾರರು ಬಹಿರಂಗ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳು ಕಾರ್ಮಿಕರ ಶ್ರಮದ ಫಲವನ್ನು ಕಿತ್ತು ಆದಾನಿ, ಅಂಬಾನಿ ಖಜಾನೆ ತುಂಬಿಸುವಂತಹ ನೀತಿಗಳಾಗಿವೆ. ನಮ್ಮ ಹೋರಾಟವನ್ನು ಹತ್ತಿಕ್ಕಲು ಇನ್ನಿಲ್ಲದ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಆದರೆ‌ ನೀವು ನಮ್ಮನ್ನು ತುಳಿದಷ್ಟು ಹೋರಾಟ ಮತ್ತೆ ಪುಟಿದು ಮೇಲೇಳುತ್ತದೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ಕಾರ್ಮಿಕರ ಬದುಕನ್ನು ಬೀದಿಗೆ ತರಲಾಗುತ್ತಿದೆ. ಉದ್ಯೋಗ ಸೃಷ್ಟಿ, ಕಪ್ಪು ಹಣ ವಾಪಸ್ ತರುತ್ತೇವೆ ಎಂದು ಮೋದಿ ಹೇಳಿದ್ದರು. ಆದರೆ, ಆ ಕೆಲಸ ಎಲ್ಲಿ ಆಗಿದೆ ಎಂದು ಬಹಿರಂಗ ಸಭೆಯಲ್ಲಿ ಮಾತನಾಡಿದ ಮುಖಂಡರು ಪ್ರಶ್ನಿಸಿದರು.

ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು ಹಾಗೂ ಕನಿಷ್ಠ ವೇತನ 21 ಸಾವಿರ ರೂಪಾಯಿಯನ್ನು ಕಾರ್ಮಿಕರಿಗೆ ನೀಡಬೇಕು. ಕಾರ್ಮಿಕರ, ರೈತರ, ಮಹಿಳೆಯರ, ಯುವಕರ ಸಮಸ್ಯೆಗಳನ್ನು ಬಗೆಹರಿಸದೆ, ಅವರ ಪರವಾದ ಯೋಜನೆಗಳನ್ನು ರೂಪಿಸಲು ನಿಮಗೆ ಆಗದಿದ್ದರೆ ಕೂಡಲೇ ಅಧಿಕಾರದಿಂದ ನೀವು ಕೆಳಗಿಳಿಯಬೇಕು ಎಂದು ಕಾರ್ಮಿಕ ಮುಖಂಡರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

Intro:

Body:ಕೊಪ್ಪಳ:- ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದು ಕರೆ ನೀಡಲಾಗಿದ್ದ ದೇಶವ್ಯಾಪಿ ಮುಷ್ಕರ ಬೆಂಬಲಿಸಿ ನಗರದಲ್ಲಿ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು. ಅಂಗನವಾಡಿ ಕಾರ್ಯಕರ್ತೆಯರ, ಬಿಸಿಯೂಟ ನೌಕರರ ಸಂಘ ಸೇರಿದಂತೆ ಅನೇಕ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಜಂಟಿಯಾಗಿ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ಕೇಂದ್ರೀಯ ಬಸ್ ನಿಲ್ದಾಣದ ಎದುರು ಜಮಾಯಿಸಿದ ಪ್ರತಿಭಟನಾಕಾರರು ಬಹಿರಂಗ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳು ಕಾರ್ಮಿಕರ ಶ್ರಮದ ಫಲವನ್ನು ಕಿತ್ತು ಆದಾನಿ, ಅಂಬಾನಿ ಖಜಾನೆ ತುಂಬಿಸುವಂತಹ ನೀತಿಗಳಾಗಿವೆ. ನಮ್ಮ ಹೋರಾಟವನ್ನು ಹತ್ತಿಕ್ಕಲು ಇನ್ನಿಲ್ಲದ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಆದರೆ‌ ನೀವು ನಮ್ಮನ್ನು ತುಳಿದಷ್ಟು ಹೋರಾಟ ಮತ್ತೆ ಪುಟಿದು ಮೇಲೆಳುತ್ತದೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಕರಣ ಮಾಡುವ ಮೂಲಕ ಕಾರ್ಮಿಕರ ಬದುಕನ್ನು ಬೀದಿಗೆ ತರುತ್ತಿದೆ. ಉದ್ಯೋಗ ಸೃಷ್ಠಿ, ಕಪ್ಪು ಹಣ ವಾಪಸ್ ತರುತ್ತೇವೆ ಎಂದು ಮೋದಿ ಹೇಳಿದ್ದರು. ಆದರೆ, ಆ ಕೆಲಸ ಎಲ್ಲಿ ಆಗಿದೆ ಎಂದು ಬಹಿರಂಗ ಸಭೆಯಲ್ಲಿ ಮಾತನಾಡಿದ ಮುಖಂಡರು ಪ್ರಶ್ನಿಸಿದರು. ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು ಹಾಗೂ ಕನಿಷ್ಠ ವೇತನ 21 ಸಾವಿರ ರುಪಾಯಿಯನ್ನು ಕಾರ್ಮಿಕರಿಗೆ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೆ ಕಾರ್ಮಿಕರ, ರೈತರ, ಮಹಿಳೆಯರ, ಯುವಕರ ಸಮಸ್ಯೆಗಳನ್ನು ಬಗೆಹರಿಸದೆ, ಅವರ ಪರವಾದ ಯೋಜನೆಗಳನ್ನು ರೂಪಿಸಲು ನಿಮಗೆ ಆಗದಿದ್ದರೆ ಕೂಡಲೇ ಅಧಿಕಾರದಿಂದ ನೀವು ಕೆಳಗೆ ಇಳಿಯಬೇಕು ಎಂದು ಕಾರ್ಮಿಕ ಮುಖಂಡರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಬೈಟ್1:- ಬಸವರಾಜ ಶೀಲವಂತರ, ಕಾರ್ಮಿಕ ಸಂಘಟನೆ ಮುಖಂಡ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.