ಕುಷ್ಟಗಿ: ನಗರದ ಕನಕದಾಸ ವೃತ್ತದಲ್ಲಿ ಅನಗತ್ಯ ಸಂಚಾರ ನಿರ್ಬಂಧಿಸಲು ಪೊಲೀಸರು ಬೈಕ್ ಸವಾರನ್ನು ತಡೆದು ವಿಚಾರಿಸಿದ್ದಾರೆ. ಆಗ ಚಿಕನ್ ತರಲು ಹೊರಗೆ ಬಂದಿರುವ ವಿಚಾರ ತಿಳಿದಾಗ ತರಾಟೆಗೆ ತೆಗೆದುಕೊಂಡ ಪೊಲೀಸರು, 100 ರೂ. ದಂಡ ಹಾಕಿದ್ದಾರೆ.
ಓದಿ: ಸತೀಶ್ ಜಾರಕಿಹೊಳಿ ಹೋರಾಟ ನಡೆಸಿ ನಮ್ಮ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ: ಡಿಕೆಶಿ
ಬೈಕ್ ಸವಾರ ಹಳೆ ಚೀಟಿ ತೋರಿಸಿ ಔಷಧಿ ತರಲು ಬಂದಿದ್ದಾಗಿ ತಿಳಿಸಿದ್ದಾನೆ. ಪೊಲೀಸರು ಅನುಮಾನದಿಂದ ಬೈಕಿನ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಚಿಕನ್ ಪತ್ತೆಯಾಗಿದೆ.
ಶನಿವಾರ, ಸರ್ಕಾರದ ಆದೇಶದನ್ವಯ ಮಧ್ಯಾಹ್ನ 12 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಸಮಯಾವಕಾಶ ಕಲ್ಪಿಸಿದರೂ, ಏನಾದರೂ ನೆಪ ಮಾಡಿಕೊಂಡು ಬೈಕ್ ಸವಾರರು, ರಸ್ತೆಗೆ ಇಳಿಯುತ್ತಿದ್ದಾರೆ. ದಂಡದ ಬಿಸಿ ಮುಟ್ಟಿಸಿ ಎಚ್ಚರಿಕೆ ಸಂದೇಶ ನೀಡಿ ಕಳುಹಿಸಲಾಗುತ್ತಿದೆ.
ಜನತಾ ಕರ್ಫ್ಯೂ ವೇಳೆ ಜನ ಸಂಚಾರ ನಿಯಂತ್ರಿಸುವ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಆದರೂ ಪೊಲೀಸರ ಕಣ್ತಪ್ಪಿಸಿ ಅನ್ಯ ಮಾರ್ಗ ಹಿಡಿದು ಓಡಾಡುವವರ ಸಂಖ್ಯೆ ಹೆಚ್ಚಿದ್ದರಿಂದ ಅಂತಹವರನ್ನು ಪತ್ತೆ ಹಚ್ಚಿ ದಂಡ ಹಾಕಲಾಗುತ್ತಿದೆ.