ETV Bharat / state

ತಡೆ ಹಿಡಿಯಲಾಗಿದ್ದ ಉತ್ತರ ಭಾರತ ಕಾರ್ಮಿಕರ ಬಿಡುಗಡೆ

author img

By

Published : May 1, 2020, 12:09 PM IST

ಕಳೆದ ಮಾರ್ಚ್​ 31 ರಂದು ತಮ್ಮ ರಾಜ್ಯಗಳಿಗೆ ತೆರಳುತ್ತಿದ್ದ ಉತ್ತರ ಭಾರತ ಮೂಲಕ ಕಾರ್ಮಿಕರನ್ನು ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಕ್ರಾಸ್​​ ಬಳಿ ತಡೆ ಹಿಡಿದಿದ್ದ ಜಿಲ್ಲಾಡಳಿತ ನಗರದ ವಸತಿ ಶಾಲೆಯಲ್ಲಿ ವಾಸ್ತವ್ಯ ಕಲ್ಪಿಸಿತ್ತು. ಸದ್ಯ ಸರ್ಕಾರದ ಅನುಮತಿಯಂತೆ ಅವರನ್ನು ರಾಜ್ಯಕ್ಕೆ ಕಳುಹಿಸಲು ಅನುಮತಿ ನೀಡಿದೆ.

kustagi-district-migrant-workers-movement
ಕೊರೊನಾ ಲಾಕ್​ಡೌನ್

ಕುಷ್ಟಗಿ: ಪಟ್ಟಣದ ಹೊರವಲಯದ ಪರಿಶಿಷ್ಟ ಜಾತಿ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಸರ್ಕಾರಿ ಕ್ವಾರಂಟೈನ್ ಆಗಿದ್ದ ಉತ್ತರ ಭಾರತ ಮೂಲದ 108 ಕಾರ್ಮಿಕರಿಗೆ ತಮ್ಮ ರಾಜ್ಯಗಳಿಗೆ ತೆರಳಲು ಅನುಮತಿ ಸಿಕ್ಕಿದೆ.

ಲಾಕ್​ಡೌನ್​ ಹಿನ್ನೆಲೆ ಕಳೆದ ಮಾರ್ಚ್​ 31 ರಂದು ತಮ್ಮ ರಾಜ್ಯಗಳಿಗೆ ತೆರಳುತ್ತಿದ್ದ ಉತ್ತರ ಭಾರತ ಮೂಲಕ ಕಾರ್ಮಿಕರನ್ನು ಕ್ಯಾದಿಗುಪ್ಪ ಕ್ರಾಸ್​​ನಲ್ಲಿ ತಡೆ ಹಿಡಿದಿದ್ದ ಜಿಲ್ಲಾಡಳಿತ ಕುಷ್ಟಗಿ ನಗರದ ವಸತಿ ಶಾಲೆಯಲ್ಲಿ ವಾಸ್ತವ್ಯ ಕಲ್ಪಿಸಿತ್ತು. ಅಲ್ಲದೆ ಅವರಿಗೆ ತೊಂದರೆಯಾಗದಂತೆ ಅವರದ್ದೆ ಶೈಲಿಯ ಆಹಾರ ಮತ್ತು ಉಡುಪಿನ ವ್ಯವಸ್ಥೆಯನ್ನೂ ಸಹ ಮಾಡಲಾಗಿತ್ತು.

ತಡೆ ಹಿಡಿಯಲಾಗಿದ್ದ ಉತ್ತರ ಭಾರತ ಕಾರ್ಮಿಕರ ಬಿಡುಗಡೆ

ಮಧ್ಯಪ್ರದೇಶದ 74, ರಾಜಸ್ಥಾನದ 34 ಹಾಗೂ ಉತ್ತರ ಪ್ರದೇಶದ ಇಬ್ಬರು ಸೇರಿ ಒಟ್ಟು 108 ಕಾರ್ಮಿಕರು ಅದರಲ್ಲಿ ಮೂವರು ಮಹಿಳೆಯರು, 6 ತಿಂಗಳ ಹಾಗೂ 4 ತಿಂಗಳ ಹಸುಗೂಸು ಇವರೊಟ್ಟಿಗಿದ್ದರು. ಅಲ್ಲದೆ ಪ್ರತಿದಿನ ಆರೋಗ್ಯ ಪರೀಕ್ಷೆಯನ್ನು ಮಾಡಲಾಗುತ್ತಿತ್ತು.

ಕನ್ನಡ ಭಾಷೆ ತಿಳಿದಿದ್ದ ರಾಜಸ್ಥಾನ ಮೂಲಕ ಮಾಂಗೀಲಾಲ್​, ಇಲ್ಲಿನ ಅಚ್ಚುಕಟ್ಟಾದ ವ್ಯವಸ್ಥೆ ಮರೆಯುವುದಿಲ್ಲ ಎನ್ನುತ್ತಾರೆ. ಮೊದಲು ಇಲ್ಲಿಂದ ಕಳುಹಿಸಿಕೊಡಿ ಎಂದು ಅಂಗಲಾಚುತ್ತಿದ್ದ ಜನ ಸದ್ಯ ಇಲ್ಲಿಂದ ಹೋಗಲು ಮನಸ್ಸು ಭಾರವೆನಿಸಿದೆ ಎನ್ನುತ್ತಿದ್ದಾರೆ ಎಂದು ಹಾಸ್ಟೆಲ್​​ ವಾರ್ಡನ್ ದ್ಯಾಮಣ್ಣ ಕರೇಕಲ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.