ಕುಷ್ಟಗಿ (ಕೊಪ್ಪಳ): ತಾಲೂಕಿನ ಕೇಸೂರು ಗ್ರಾಮದ ರೋಗಿ-2254ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಕೇಸೂರು ಗ್ರಾಮ ಪಂಚಾಯಿತಿಯಲ್ಲಿ ತಹಶೀಲ್ದಾರ್ ಎಂ.ಸಿದ್ದೇಶ್ ತುರ್ತು ಸಭೆ ನಡೆಸಿದರು.
ಕೇಸೂರು ಗ್ರಾಮವನ್ನು ಸಂಪೂರ್ಣ ಸೀಲ್ ಡೌನ್ ಮಾಡಿದ್ದು, ನಿವಾಸಿಗಳಿಗೆ ಕುಡಿಯುವ ನೀರು, ಹಾಲು, ತರಕಾರಿ, ದಿನ ಬಳಕೆಯ ವಸ್ತುಗಳನ್ನ ತಲುಪಿಸುವ ಕುರಿತು ಚರ್ಚಿಸಲಾಯಿತು. ಅಲ್ಲದೆ ಅಗತ್ಯ ವಸ್ತುಗಳನ್ನ ಪೂರೈಸುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಯಿತು.
ತಾಲೂಕಿನ ದೋಟಿಹಾಳವನ್ನ ಬಫರ್ ಝೋನ್ ಎಂದು ಘೋಷಿಸಿದ ಹಿನ್ನೆಲೆ ವಾಹನ ಸಂಚಾರಕ್ಕೆ ಪಾಸ್ ಪಡೆದು ಸಂಚರಿಸುವುದು ಕಡ್ಡಾಯವಾಗಿದೆ ಪಿಎಸ್ಐ ಚಿತ್ತರಂಜನ್ ನಾಯಕ್ ತಿಳಿಸಿದರು.