ETV Bharat / state

ಕುಷ್ಟಗಿ: ಬಿಸಿಯೂಟ ನೌಕರರಿಗೂ ಪರಿಹಾರ ಘೋಷಿಸುವಂತೆ ಮನವಿ

author img

By

Published : May 27, 2020, 3:41 PM IST

ಕೋವಿಡ್-19 ಲಾಕ್​ಡೌನ್ ಸಂಕಷ್ಟದ ಪರಿಸ್ಥಿತಿಯಲ್ಲೂ ಆಹಾರ ಧಾನ್ಯ ಮನೆ ಮನೆಗೆ ತಲುಪಿಸುವ ಕಾರ್ಯ ನಿರ್ವಹಿಸಿರುವ ಅಕ್ಷರ ದಾಸೋಹ ಸಿಬ್ಬಂದಿಗೆ ಪರಿಹಾರ ನೀಡಬೇಕು ಎಂದು ಕುಷ್ಟಗಿಯಲ್ಲಿ ಮನವಿ ಸಲ್ಲಿಸಲಾಗಿದೆ.

das
ಬಿಸಿ ಊಟದ ನೌಕರರಿಗೂ ಪರಿಹಾರ ಘೋಷಿಸುವಂತೆ ಮನವಿ

ಕುಷ್ಟಗಿ: ಅಕ್ಷರ ದಾಸೋಹ ಯೋಜನೆಯ ನೌಕರರಿಗೆ ಪರಿಹಾರ ನೀಡಬೇಕು ಎಂದು ಬಿಸಿಯೂಟ ನೌಕರರ ಸಂಘದಿಂದ ಯೋಜನಾಧಿಕಾರಿ ಕೆ.ಶರಣಪ್ಪಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷೆ ಅನ್ನಪೂರ್ಣ, ಶಾಲೆ ಬಂದ್ ಆಗಿದ್ದರೂ ಸರ್ಕಾರದಿಂದ ಯಾವುದೇ ಪರಿಹಾರವಿಲ್ಲ. ಅಕ್ಷರ ದಾಸೋಹ ಯೋಜನೆಯ ನೌಕರರು ತಿಂಗಳಿಗೆ 2,600ರಿಂದ 2,700 ಕನಿಷ್ಠ ಗೌರವಧನ ಪಡೆಯುತ್ತಿದ್ದಾರೆ.

ಈಗಾಗಲೇ ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರಿಗೆ ಕ್ವಾರಂಟೈನ್​ನಲ್ಲಿ ಊಟದ ವ್ಯವಸ್ಥೆ ಮಾಡಿ ಸೇವೆ ಸಲ್ಲಿಸಿದ್ದೇವೆ. ಏಪ್ರಿಲ್ ತಿಂಗಳಿನಿಂದ ಶಾಲೆ ಆರಂಭವಾಗುವವರೆಗೂ ವೇತನ ನೀಡಬೇಕು. ಎಲ್ಲಾ ನೌಕರರಿಗೆ ಎಲ್.ಐ.ಸಿ ಆಧಾರಿತ ಪೆನ್ಷನ್ ನೀಡಬೇಕೆಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.