ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತರ ಗಂಟಲು ದ್ರವ ಪಡೆಯಲು ಧರಿಸುವ ಪಿಪಿಇ ಕಿಟ್ ಬಳಕೆ ನಂತರ ಎಲ್ಲೆಂದರಲ್ಲಿ ಬಿಸಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಿಸುವ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸುರಕ್ಷತೆಯ ದೃಷ್ಟಿಯಿಂದ ಪಿಪಿಇ ಕಿಟ್ ಧರಿಸುತ್ತಾರೆ. ಬಳಸಿದ ನಂತರ ಪ್ರತ್ಯೇಕ ಕವರ್ನಲ್ಲಿ ಅದನ್ನು ಒಂದೆಡೆ ಸಂಗ್ರಹಿಸಿಡಬೇಕು. ನಂತರ ವಾರಕ್ಕೊಮ್ಮೆ ಬರುವ ಶರಣು ಅಸೋಸಿಯೇಟ್ಸ್ ವಾಹನದಲ್ಲಿ ಈ ತ್ಯಾಜ್ಯ ಇಲ್ಲಿಂದ ವಿಲೇವಾರಿಯಾಗುತ್ತದೆ.
ಆದರೆ ಇಲ್ಲಿ ಬಳಸಿದ ಪಿಪಿಇ ಕಿಟ್ಗಳು ಕ್ಯಾಂಟೀನ್ ಹಿಂದೆಯೇ ಬಿಸಾಡಿದ್ದಾರೆ. ಇದನ್ನು ಪ್ರಶ್ನಿಸಿದರೆ ನಾವೇನು ಮಾಡಲು ಸಾಧ್ಯ ಎನ್ನುವ ಉತ್ತರ ಕೇಳಿ ಬರುತ್ತಿದೆ ಎನ್ನಲಾಗಿದೆ. ಈ ಕುರಿತು ಆಸ್ಪತ್ರೆಯ ಮುಖ್ಯಸ್ಥ ಡಾ. ಚಂದ್ರಕಾಂತ ಮಂತ್ರಿ ಅವರನ್ನು ಕೇಳಿದಾಗ, ತಾವು ರಜೆಯಲ್ಲಿರುವುದಾಗಿ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.