ETV Bharat / state

ಕುಷ್ಟಗಿ: ದಾಳಿಂಬೆ ಸಾಲ ಮಾಡಿದ್ದ ರೈತರಿಗೆ ಬ್ಯಾಂಕ್​​ನಿಂದ ನೋಟಿಸ್, ಕಿರುಕುಳ ಆರೋಪ - Koppal News

ಕುಷ್ಟಗಿ ತಾಲೂಕಿನ ಹನುಮಸಾಗರ ಕರ್ನಾಟಕ ಗ್ರಾಮೀಣ ಬ್ಯಾಂಕ್​​, ದಾಳಿಂಬೆ ಬೆಳೆಗಾಗಿ ಸಾಲ ಮಾಡಿದ್ದ ರೈತರಿಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ದಾಳಿಂಬೆ ಹೋರಾಟ ಸಮಿತಿ ಅಧ್ಯಕ್ಷ ಅಬ್ದುಲ್ ನಯೀಮ್ ದೂರಿದ್ದಾರೆ.

Notice harassed for farmers who have borrowed pomegranates
ದಾಳಿಂಬೆ ಸಾಲ ಮಾಡಿದ್ದ ರೈತರಿಗೆ ಬ್ಯಾಂಕ್​​ನಿಂದ ನೋಟಿಸ್ ಕಿರುಕುಳ
author img

By

Published : Sep 9, 2020, 9:48 PM IST

ಕುಷ್ಟಗಿ (ಕೊಪ್ಪಳ): ತಾಲೂಕಿನ ಹನುಮಸಾಗರ ಕರ್ನಾಟಕ ಗ್ರಾಮೀಣ ಬ್ಯಾಂಕ್​, ದಾಳಿಂಬೆ ಬೆಳೆಗಾಗಿ ಸಾಲ ಮಾಡಿದ್ದ ರೈತರಿಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ದಾಳಿಂಬೆ ಹೋರಾಟ ಸಮಿತಿ ಅಧ್ಯಕ್ಷ ಅಬ್ದುಲ್ ನಯೀಮ್ ದೂರಿದ್ದಾರೆ.

Notice harassed for farmers who have borrowed pomegranates
ದಾಳಿಂಬೆ ಸಾಲ ಮಾಡಿದ್ದ ರೈತರಿಗೆ ಬ್ಯಾಂಕ್​​ನಿಂದ ನೋಟಿಸ್ ಕಿರುಕುಳ

ಕುಷ್ಟಗಿ ತಾಲೂಕಿನ ಕುಂಬಳಾವತಿ ಗ್ರಾಮದ ರೈತ ಫಕೀರ ಸಿಂಗ್ ರಜಪೂತ ಹಾಗೂ ಮಂಜುನಾಥ ಸಿಂಗ್ ರಜಪೂತ ಸಹೋದರರಿಬ್ಬರು ಹನುಮಸಾಗರ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ 2007ರ ಸೆಪ್ಟಂಬರ್​ 11ರಂದು 4,40,000 ರೂ. ಸಾಲ ಮಾಡಿದ್ದರು. ಆದರೆ, ಹವಾಮಾನ ವೈಪರಿತ್ಯ ಹಾಗೂ ದುಂಡಾಣು ಅಂಗಮಾರಿ ರೋಗದಿಂದಾಗಿ ದಾಳಿಂಬೆ ಬೆಳೆ ಸಂಪೂರ್ಣ ನಾಶವಾಗಿತ್ತು. ಇದರಿಂದ ರೈತರಿಗೆ ಸಾಲ ತೀರಿಸಲು ಸಾಧ್ಯವಾಗಿರಲ್ಲಿಲ್ಲ. ಈ ಸಾಲದ ಅಸಲು, ಬಡ್ಡಿ ಸೇರಿ 2020ರ ಸೆಪ್ಟಂಬರ್​ಗೆ 20,75,621 ರೂ. ಆಗಿದೆ.

ಈಗಾಗಲೇ ಸಾಲದ ಹೊರೆಯಿಂದ ತತ್ತರಿಸಿರುವ ರೈತರಿಗೆ ಬ್ಯಾಂಕಿನವರು ಫೋನ್ ಹಾಗೂ ಪದೇ-ಪದೇ ನೋಟಿಸ್ ನೀಡಿ ಕಿರುಕುಳಕ್ಕೆ ನೀಡುತ್ತಿದ್ದಾರೆ. ಜೊತೆಗೆ ಇವರ ಸಾಲಕ್ಕೆ ಜಾಮೀನು ನೀಡಿದ ದ್ಯಾಮಪ್ಪ ಗಾಣದಾಳ ಎಂಬ ರೈತನಿಗೂ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ದಾಳಿಂಬೆ ಸಾಲದ ಪರಿಹಾರವಾಗಿ 150 ಕೋಟಿ ರೂ. ಮೀಸಲಿಟ್ಟಿದ್ದರು. ಈ ಮೊತ್ತವನ್ನು ಸಾಲದ ಕಿರುಕುಳ ಎದುರಿಸುವ ರೈತರ ಖಾತೆಗೆ ವರ್ಗಾಯಿಸಿ ರೈತರ ಜೀವ ಉಳಿಸಲು ಈಗಿನ ಸಿಎಂ ಯಡಿಯೂರಪ್ಪ ಪ್ರಯತ್ನಿಸಬೇಕು ಎಂದು ಅಬ್ದುಲ್ ನಯೀಮ್ ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.