ETV Bharat / state

ಪುರಾಣ ವೈಶಿಷ್ಟ್ಯ ಕೋಟಿಲಿಂಗ ದೇವಾಲಯದಲ್ಲಿ ವಿಭಿನ್ನ ಈ ಸೋಮನಾಥ ಸನ್ನಿಧಿ

ಒಂದು ಲಿಂಗದಲ್ಲಿ 5ರಿಂದ ನೂರಾರು ಲಿಂಗಗಳಿವೆ. ಇಂತಹ ಅನೇಕ ಲಿಂಗಗಳನ್ನು ಸೇರಿಸಿದರೆ 3 ಕೋಟಿ ಲಿಂಗಗಳು ಆಗುತ್ತವೆ. ಹೀಗಾಗಿ ಇದನ್ನು ಕೋಟಿಲಿಂಗ ದೇವಸ್ಥಾನ ಎನ್ನುತ್ತಾರೆ. ಇನ್ನು ಸಾಮಾನ್ಯವಾಗಿ ಶಿವಲಿಂಗಗಳ ಪಾಣಿಮೆಟ್ಲು ಎದುರಿಗೆ ಕುಳಿತವರಿಗೆ ಬಲಭಾಗದಲ್ಲಿ ಬರುತ್ತದೆ. ಆದರೆ ಇಲ್ಲಿನ ದೇವಸ್ಥಾನದ ಗರ್ಭಗುಡಿಯಲ್ಲಿರುವ ಶಿವಲಿಂಗದ ಪಾಣಿಮೆಟ್ಲು ಎಡಭಾಗಕ್ಕೆ ಬರುತ್ತದೆ.

kotilinga-temple
ಸೋಮನಾಥ ಸನ್ನಿಧಿ
author img

By

Published : Mar 11, 2021, 7:19 AM IST

ಕೊಪ್ಪಳ: ಅದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣವಾಗಿರುವ ದೇವಸ್ಥಾನ. ಆ ದೇವಸ್ಥಾನದಲ್ಲಿ ಬರೋಬ್ಬರಿ ಕೋಟಿ ಲಿಂಗಗಳಿವೆ. ಹೀಗಾಗಿ ಈ ಕ್ಷೇತ್ರವನ್ನು ಕೋಟಿಲಿಂಗಗಳ ಕ್ಷೇತ್ರ ಎಂದು ಕರೆಯಲಾಗುತ್ತದೆ. ಅಲ್ಲದೆ ಈ ದೇವಸ್ಥಾನದ ಗರ್ಭಗುಡಿಯಲ್ಲಿರುವ ಲಿಂಗವಿನ ಪಾಣಿಮೆಟ್ಟಿಲು ಲಿಂಗದ ಬಲಭಾಗದಲ್ಲಿರೋದು ಮತ್ತೊಂದು ವಿಶೇಷ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪುರ ಗ್ರಾಮದಲ್ಲಿರುವ ಸೋಮೇಶ್ವರ ಅಥವಾ ಸೋಮನಾಥ ದೇವಾಲಯ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಕೋಟಿಲಿಂಗಗಳ ದೇವಸ್ಥಾನ ಎಂದು ಪ್ರಸಿದ್ಧಿ ಪಡೆದಿದೆ. ಇಡೀ ದೇವಸ್ಥಾನ ಭೂಮಿಯ ಒಳಾಂಗಣದಲ್ಲಿದ್ದು, ಗೋಪುರಗಳು ಮಾತ್ರ ಮೇಲೆ ಕಾಣುತ್ತವೆ.

ಪುರಾಣ ವೈಶಿಷ್ಟ್ಯ ಕೋಟಿಲಿಂಗ ದೇವಾಲಯದಲ್ಲಿ ವಿಭಿನ್ನ ಈ ಸೋಮನಾಥ ಸನ್ನಿಧಿ

ಅಲ್ಲಿರುವ ಶಾಸನಗಳ ಪ್ರಕಾರ ಓಹಿಲಯ್ಯ ಅಥವಾ ಓಹಿಲೇಶ್ವರ ಎಂಬ ಶಿವಭಕ್ತ ಈ ಸೋಮೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿದ್ದಾನೆ. ವಿಜಯನಗರ ಸಾಮ್ರಾಜ್ಯ ಅಸ್ತಿತ್ವದ ಸಂದರ್ಭದಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ ಎನ್ನುತ್ತದೆ ಇತಿಹಾಸ. ಈ ದೇವಸ್ಥಾನದ ಮೇಲೆ ಬೇರೆ ರಾಜರುಗಳಿಂದ ಯಾವುದೇ ರೀತಿಯ ದಾಳಿಗಳಾಗಬಾರದು ಎಂಬ ಉದ್ದೇಶದಿಂದ ದೇವಸ್ಥಾನವನ್ನು ನೆಲಮಟ್ಟದಲ್ಲಿ ನಿರ್ಮಾಣ ಮಾಡಲಾಗಿದೆ ಎಂಬ ಮಾತಿದೆ.

ಪುರದ ಈ ಕೋಟಿಲಿಂಗ ದೇವಸ್ಥಾನ ಅನೇಕ ವಿಶೇಷತೆಗಳಿಂದ‌ ಕೂಡಿದೆ. ಒಂದು ಲಿಂಗದಲ್ಲಿ 5ರಿಂದ ನೂರಾರು ಲಿಂಗಗಳಿವೆ. ಇಂತಹ ಅನೇಕ ಲಿಂಗಗಳನ್ನು ಸೇರಿಸಿದರೆ 3 ಕೋಟಿ ಲಿಂಗಗಳು ಆಗುತ್ತವೆ. ಹೀಗಾಗಿ ಇದನ್ನು ಕೋಟಿಲಿಂಗ ದೇವಸ್ಥಾನ ಎನ್ನುತ್ತಾರೆ. ಇನ್ನು ಸಾಮಾನ್ಯವಾಗಿ ಶಿವಲಿಂಗಗಳ ಪಾಣಿಮೆಟ್ಲು ಎದುರಿಗೆ ಕುಳಿತವರಿಗೆ ಬಲಭಾಗದಲ್ಲಿ ಬರುತ್ತದೆ. ಆದರೆ ಇಲ್ಲಿನ ದೇವಸ್ಥಾನದ ಗರ್ಭಗುಡಿಯಲ್ಲಿರುವ ಶಿವಲಿಂಗದ ಪಾಣಿಮೆಟ್ಲು ಎಡಭಾಗಕ್ಕೆ ಬರುತ್ತದೆ.

ಪುರಾಣ ಕಥೆಯಲ್ಲಿ ಅಡಗಿದೆ ಲಿಂಗದ ಕಥೆ

ಕೋಟಿಲಿಂಗದ ಈ ದೇವಸ್ಥಾನದಲ್ಲಿ ಹರಿವಾಣ ಲಿಂಗು, ನಕ್ಷತ್ರಾಕಾರದ ಲಿಂಗು, ಚತುರ್ಮುಖ ನಂದಿ, ನಾಗ ತೋರಣ, ಮೂರು ಕಾಲಿನ ಶಿಲಾ ಮಂಚ, ಕೈಲಾಸ ಏಣಿ ಸೇರಿದಂತೆ ಅನೇಕ ವಿಶೇಷತೆಗಳು ಕಂಡುಬರುತ್ತವೆ. ಈ ದೇವಸ್ಥಾನದಿಂದ ಲಿಂಗವೊಂದು ಕೋಪಗೊಂಡು ಹೊರಹೋಗಿದೆ ಎಂಬ ಪುರಾಣ ಕಥೆ ಇದೆ. ಸ್ಥಳೀಯರು ಹೇಳುವ ಕಥೆಯ ಪ್ರಕಾರ ದೇವಸ್ಥಾನದಲ್ಲಿ ಹರಿವಾಣ ಲಿಂಗದಲ್ಲಿ ಎಲ್ಲ ಲಿಂಗುಗಳಿಗೆ ಅವರೇಕಾಳಿನ ನೈವೇದ್ಯ ಮಾಡುವಾಗ ಒಂದು ಲಿಂಗುವಿಗೆ ನೈವೇದ್ಯ ಸಿಗಲಿಲ್ಲವಂತೆ. ಇದರಿಂದ ಬೇಸರಗೊಂಡ ಲಿಂಗವೊಂದು ಕೋಪಗೊಂಡು ದೇವಸ್ಥಾನದಿಂದ ಹೊರಹೋಗಿ ಊರ ಮರವೊಂದರ ಬಳಿ ಕುಳಿತಿದೆ ಎನ್ನುತ್ತಾರೆ.

ಅಲ್ಲದೆ ಈಗಲೂ ಈ ಲಿಂಗಕ್ಕೆ ಸೆಟಗೊಂಡ ಲಿಂಗ ಎಂದು ಜನರು ಪೂಜಿಸುತ್ತಾರೆ. ಸಾಕಷ್ಟು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಪುರ ಕೋಟಿಲಿಂಗ ದೇವಸ್ಥಾನದ ಬಗ್ಗೆ ಪುರಾತತ್ವ ಹಾಗೂ ಪ್ರಾಚ್ಯವಸ್ತು ಇಲಾಖೆ ದಿವ್ಯ ನಿರ್ಲಕ್ಷ್ಯವಹಿಸುತ್ತಿದೆ. ಈ ಕ್ಷೇತ್ರದ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ಇಲ್ಲದಂತಾಗಿದೆ. ಅಲ್ಲದೆ ದೇವಸ್ಥಾನದ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.